Urdu   /   English   /   Nawayathi

ದೆಹಲಿ: ನಿರ್ಮಾಣ ಹಂತದ ಮೆಟ್ರೋ ನಿಲ್ದಾಣದಿಂದ ಜನರ ಮೇಲೆ ಬಿದ್ದ 'ರಾಸಾಯನಿಕ'; 1 ಸಾವು, ಐವರಿಗೆ ಗಾಯ

share with us

ನವದೆಹಲಿ: 04 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ರಾಜಧಾನಿ ದೆಹಲಿಯಲ್ಲಿ ನಿರ್ಮಾಣ ಹಂತದ ಮೆಟ್ರೋ ನಿಲ್ದಾಣದಿಂದ ರಾಸಾಯನಿಕ ಜನರ ಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, 5 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. 

ಮೃತ ವ್ಯಕ್ತಿಯನ್ನು ಅಮಿತ್ ಚೌಹಾಣ್ (32) ಎಂದು ಗುರ್ತಿಸಲಾಗಿದೆ. ಜೊಹ್ರಿ ಎನ್'ಕ್ಲೇವ್ ಮೆಟ್ರೋ ನಿಲ್ದಾಣ ಹೊರಾಂಗಣದಲ್ಲಿ ಆ್ಯಸಿಡ್ ಬಿದ್ದಿದೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಜನರ ಮೇಲೆ ಬಿದ್ದಿದೆ. 

ಸ್ಥಳದಲ್ಲಿ ಯಾವುದೇ ರೀತಿಯ ಕಾಮಗಾರಿ ಕಾರ್ಯಗಳೂ ನಡೆಯುತ್ತಿರಲಿಲ್ಲ. ಸ್ಥಳದಲ್ಲಿ ನಿರ್ಮಾಣದ ಎಲ್ಲಾ ಕಾರ್ಯಗಳೂ ಪೂರ್ಣಗೊಂಡಿದ್ದವು. ಕೇವಲ ಪರಿಶೀಲನಾ ಕಾರ್ಯಗಳಷ್ಟೇ ನಡೆಯುತ್ತಿತ್ತು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا