Urdu   /   English   /   Nawayathi

ನಮ್ಮ ಸೇನೆ ಬೆಂಬಲ ಇಲ್ಲದೇ ಸೌದಿ ಅರೇಬಿಯಾ ರಾಜ 2 ವಾರಗಳೂ ಅಧಿಕಾರದಲ್ಲಿರುವುದಿಲ್ಲ: ಟ್ರಂಪ್

share with us

ವಾಷಿಂಗ್ ಟನ್: 04 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ, ಅಸ್ಥಿರತೆ ಉಂಟಾಗುತ್ತಿರುವ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್ ಹೊಸದೊಂದು ಬಾಂಬ್ ಸಿಡಿಸಿ ಸೌದಿ ತಲೆ ನೋವಿಗೆ ಕಾರಣವಾಗುವಂತಹ ಹೇಳಿಕೆ ನೀಡಿದ್ದಾರೆ. ಇರಾನ್ ಮೇಲೆ ಟ್ರಂಪ್ ನಿರ್ಬಂಧ ವಿಧಿಸಿರುವುದರ ಪರಿಣಾಮ ನವೆಂಬರ್ ನಲ್ಲಿ ಕಾಣಿಸಿಕೊಳ್ಳಲಿದ್ದು ತೈಲ ಬೆಲೆ ಬ್ಯಾರೆಲ್ ಗೆ 100 ಡಾಲರ್ ಮುಟ್ಟುವ ಸಾಧ್ಯತೆಗಳಿವೆ. ಈ ನಡುವೆ ಡೊನಾಲ್ಡ್ ಟ್ರಂಪ್ ತೈಲ ಬೆಲೆಯನ್ನು ಕಡಿಮೆ ಮಾಡುವಂತೆ ಸೌದಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಷ್ಟೇ ಸಾಲದು ಎಂಬಂತೆ ಈಗ ಅಮೆರಿಕ ಸೇನೆ ಬೆಂಬಲ ಇಲ್ಲದೇ ಸೌದಿಯ ರಾಜ 2 ವಾರಗಳೂ ಅಧಿಕಾರದಲ್ಲಿರುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. 

ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಜಗತ್ತಿನ ಬೆಳವಣಿಗೆಗೆ ಸಹಕರಿಸುವುದಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾ  ರಾಜನ ಜೊತೆ ಟ್ರಂಪ್ ಶನಿವಾರ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ ಸೌದಿ ಬಗ್ಗೆ ಮಾತನಾಡಿರುವ ಟ್ರಂಪ್, ನಾವು ಸೌದಿ ಅರೇಬಿಯಾವನ್ನು ರಕ್ಷಿಸುತ್ತೇವೆ, ಆದರೆ ಅವರನ್ನು ಶ್ರೀಮಂತರೆನ್ನುತ್ತೀರಾ? ಸೌದಿ ಅರೇಬಿಯಾ ದೊರೆಯೆಂದರೆ ನನಗೆ ಅಚ್ಚುಮೆಚ್ಚು , ಅಲ್ಲಿನ ದೊರೆಯನ್ನು ನಾವು ರಕ್ಷಿಸುತ್ತಿದ್ದೇವೆ, ನಮ್ಮ ಸೇನೆ ಬೆಂಬಲ ಇಲ್ಲದೇ ಸೌದಿ ಅರೇಬಿಯಾ ರಾಜ 2 ವಾರಗಳೂ ಅಧಿಕಾರಲ್ಲಿರುವುದಕ್ಕೆ ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿ ಅಚ್ಚರಿ ಮೂಡಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا