Urdu   /   English   /   Nawayathi

22 ಕೋಟಿ ರೂ. ವೆಚ್ಚದಲ್ಲಿ ಸೈಬರ್ ಲ್ಯಾಬ್ ನಿರ್ಮಾಣಕ್ಕೆ ಇನ್ಫೋಸಿಸ್ ಜೊತೆ ಒಪ್ಪಂದ

share with us

ಬೆಂಗಳೂರು: 03 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಸೈಬರ್ ಕ್ರೈಮ್‍ನಲ್ಲಿ ಅಪರಾಧ ಪತ್ತೆಗೆ ಸುಮಾರು 22ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ತಂತ್ರಜ್ಞಾನದ ಸೈಬರ್ ಲ್ಯಾಬ್ ಅನುಷ್ಠಾನಕ್ಕೆ ಇನ್ಫೋಸಿಸ್ ಹಾಗೂ ಸರ್ಕಾರ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಕರಾರು ಪತ್ರಕ್ಕೆ ಸಹಿ ಹಾಕಿ ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದರು.

ಹೆಚ್ಚುತ್ತಿರುವ ಸೈಬರ್ ಕ್ರೈಮ್‍ಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲು ಅಗತ್ಯವಿರುವ ಲ್ಯಾಬ್ ನಿರ್ಮಾಣಕ್ಕೆ ಇನ್ಫೋಸಿಸ್ ಸಹಯೋಗದಲ್ಲಿ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಒಪ್ಪಂದದ ಭಾಗವಾಗಿ ಫೌಂಡೇಷನ್ ಈ ಎಲ್ಲ ವಿಚಾರಗಳಿಗೆ ಬೆಂಬಲಿಸಲಿದೆ:

ಸ್ಥಾಪನೆಯ ವೆಚ್ಚ. ಇದರಲ್ಲಿ ಸೌಲಭ್ಯಗಳು ಹಾಗೂ ಕಾರ್ಯಾಚರಣೆ ವೆಚ್ಚ ಸೇರಿದೆ. ಇದರಲ್ಲಿ ಸಾಧನಗಳು ಹಾಗೂ ಅವುಗಳ ಭಾಗಗಳ ನಿರ್ವಹಣೆ ಸೇರಿದೆ.
ಹಾರ್ಡ್‍ವೇರ್, ಸಾಫ್ಟ್‍ವೇರ್‍ಗಳ ಸ್ಥಾಪನೆಗೆ ಬಂಡವಾಳ ಹೂಡಿಕೆ. ತರಬೇತಿ ಕಾರ್ಯಕ್ರಮಗಳ ಆಯೋಜನೆ, ಕಾನ್ಫರೆನ್ಸ್ ಹಾಗೂ ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಣಾ ಕಾರ್ಯಕ್ರಮಗಳ ಆಯೋಜನೆಗೆ ಹಣಕಾಸಿನ ಹೂಡಿಕೆ.  ತಾಂತ್ರಿಕ ಮೂಲಸೌಕರ್ಯಗಳನ್ನು ದೊರಕಿಸುವುದು. ಇದರಲ್ಲಿ ವಿಶೇಷ ಪರಿಕರಗಳನ್ನು ಒದಗಿಸುವುದು ಹಾಗೂ ಅದರ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯೂ ಸೇರಿದೆ. ಐದು ವರ್ಷಗಳ ಕಾಲ ಪ್ರಸ್ತುತ ಇರುವ ಸೈಬರ್ ಲ್ಯಾಬ್‍ಗಳನ್ನು ಉನ್ನತೀಕರಿಸುವುದು.

ಒಪ್ಪಂದದ ಕುರಿತು ಮಾತನಾಡಿದ ಇನ್ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ, “ಸಿಸಿಐಟಿಆರ್ ಪ್ರಸ್ತುತ ಹಾಗೂ ಭವಿಷ್ಯದ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. ಇದರ ಮೂಲಕ ಕರ್ನಾಟಕದಲ್ಲಿ ಸೈಬರ್ ಹಾಗೂ ಫೋರೆನ್ಸಿಕ್ ಅಪರಾಧಗಳ ತನಿಖೆಗೆ ಅತ್ಯಂತ ಉತ್ಕøಷ್ಟವಾಗಿರುವ ಸೌಲಭ್ಯಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ. ಈ ಯೋಜನೆಗೆ ಕೊಡುಗೆ ನೀಡಲು ಇನ್ಫೋಸಿಸ್ ಫೌಂಡೇಷನ್ ಹೆಮ್ಮೆ ಪಡುತ್ತಿದೆ. ಈ ಯೋಜನೆ ಜಾರಿಗೆ ಬಂದ ಬಳಿಕ ಕರ್ನಾಟಕ ಪೊಲೀಸ್‍ನ ಸಿಐಡಿ ವಿಭಾಗ ಹಾಗೂ ಡಿಎಸ್‍ಸಿಐಯು, ತಂತ್ರಜ್ಞಾನದ ದುರ್ಬಳಕೆ ಹಾಗೂ ತಂತ್ರಜ್ಞಾನವನ್ನು ಅನೈತಿಕವಾಗಿ ಬಳಸಿಕೊಳ್ಳುವುದರಿಂದ ಆಗುತ್ತಿರುವ ತೊಂದರೆ ತಪ್ಪಿಸುವಲ್ಲಿ ಮೈಲುಗಲ್ಲೊಂದನ್ನು ಸ್ಥಾಪಿಸಲಿದೆ,’’ ಎಂದರು.

“ಜಾಲತಾಣವು ಜಾಗತಿಕವಾಗಿ ಎಲ್ಲ ಗಡಿರೇಖೆಗಳನ್ನು ಮೀರಿ ಕಾರ್ಯಾಚರಿಸುತ್ತಿರುವ ಹಾಗೂ ನಿರ್ದಿಷ್ಟ ಆಡಳಿತಕ್ಕೆ ಒಳಪಡದ ವಿಶಾಲ ವ್ಯಾಪ್ತಿಯ ಜಾಗವಾಗಿದೆ. ಕಾಲಕ್ರಮೇಣ ಅಪರಾಧಿಗಳು, ಸೈಬರ್ ಸ್ಪೇಸ್‍ಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಮ್ಮ ಅಪರಾಧ ಕೇಂದ್ರಗಳನ್ನಾಗಿ ಮಾಡಿ ಬಳಸಿಕೊಳ್ಳುತ್ತಿದ್ದಾರೆ. ಈ ಒಂದು ಸವಾಲನ್ನು ಮೆಟ್ಟಿ ನಿಲ್ಲಲು ಕಾನೂನು ಜಾರಿ ಮಾಡುವ ಸಂಸ್ಥೆಗಳು ಅತ್ಯಂತ ಸುಧಾರಿತ ಹಾರ್ಡ್‍ವೇರ್, ಸಾಫ್ಟ್‍ವೇರ್ ಹಾಗೂ ಅನುಭವಿ ಸಂಶೋಧಕರನ್ನು ಹೊಂದಿಕೊಳ್ಳಬೇಕಾಗಿದೆ. ಸೈಬರ್ ಕ್ರೈಂ ಪ್ರಕರಣಗಳಲ್ಲಿ, ಸುಧಾರಿತ ತನಿಖೆ ಹಾಗೂ ನ್ಯಾಯಾಲಯಗಳಲ್ಲಿ ನಿಖರವಾದ ವಾದ ಮಂಡಿಸಲು ಕರ್ನಾಟಕ ಪೊಲೀಸ್ ಇಲಾಖೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿಶೇಷ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಮುಂದೆ ಬಂದಿರುವ ಇನ್ಫೋಸಿಸ್ ಫೌಂಡೇಷನ್ ಹಾಗೂ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‍ಸಿಐ)ಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಹೇಳಲು ಬಯಸುತ್ತೇನೆ. ಇದು ಖಾಸಗಿ- ಸರಕಾರಿ ಸಹಭಾಗಿತ್ವಕ್ಕೆ ಅತ್ಯುತ್ತಮ ಉದಾಹರಣೆ,’’ ಎಂದು ಕರ್ನಾಟಕ ಪೊಲೀಸ್‍ನ ಸಿಐಡಿ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿರುವ ಶ್ರೀ ಪ್ರವೀಣ್ ಸೂದ್ (ಐಪಿಎಸ್) ಅವರು ಹೇಳಿದರು.

“”ನಮ್ಮ ಸೈಬರ್ ಫೋರೆನ್ಸಿಕ್ ತೊಡಗುವಿಕೆಯ ಮೂಲಕ ಸೈಬರ್ ಕ್ರೈಂಗಳ ನಿರ್ವಹಣೆಗಾಗಿ ಕಾನೂನು ಜಾರಿಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಡಿಎಸ್‍ಸಿಐ ನಿರಂತರ ಬದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಡಿಎಸ್‍ಸಿಐ ಸಿದ್ಧಪಡಿಸಿರುವ ಸೈಬರ್ ಕ್ರೈಂ ತನಿಖಾ ಕೈಪಿಡಿಗಳು ಸೈಬರ್ ಕ್ರೈಂಗಳನ್ನು ತನಿಖೆ ಮಾಡುವ ಪೊಲೀಸ್, ಸರಕಾರಿ ವಕೀಲರು ಹಾಗೂ ನ್ಯಾಯಾಂಗಕ್ಕೆ ಪರಾಮರ್ಶನ ಪರಿಕರವಾಗಿದೆ. ಇನ್ಫೋಸಿಸ್ ಫೌಂಡೇಷನ್‍ನ ಸಹಯೋಗದಲ್ಲಿ ಕರ್ನಾಟಕ ಸಿಐಡಿ ಕೇಂದ್ರ ಕಚೇರಿಯಲ್ಲಿ ಸೆಂಟರ್‍ಫಾರ್ ಸೈಬರ್ ಕ್ರೈಂ ಇನ್‍ವೆಸ್ಟಿಗೇಷನ್ ಟ್ರೈನಿಂಗ್ ಆ್ಯಂಡ್ ರೀಸರ್ಚ್ ಅನ್ನು ಸ್ಥಾಪಿಸಲು ಡಿಎಸ್‍ಸಿಐ ಸಂತೋಷಪಡುತ್ತಿದೆ. ಈ ಕೇಂದ್ರವು ಕರ್ನಾಟಕ ಪೊಲೀಸ್‍ನ ತನಿಖಾ ಸಾಮಥ್ರ್ಯವನ್ನು ಹೆಚ್ಚಿಸಲಿದೆ,’’ ಎಂದು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಿಇಒ ರಮಾ ವೇದಶ್ರೀ ಅವರು ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا