Urdu   /   English   /   Nawayathi

ಭೂ ವಿವಾದ: ನ್ಯಾಯ ಸಿಗಲಿಲ್ಲ ಎಂದು ನೊಂದು ಆತ್ಮಹತ್ಯೆಗೆ ಮುಂದಾದ ಎಎಸ್ಐ; ವಿಡಿಯೊ ವೈರಲ್

share with us

ಕೋಲಾರ: 03 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ತಮ್ಮ ಭೂ ವಿವಾದವನ್ನು ಸರ್ಕಾರ ಬಗೆಹರಿಸುತ್ತಿಲ್ಲ ಎಂದು ಮನನೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚಿಕ್ಕಬಳ್ಳಾಪುರದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಪೆಟ್ರೋಲ್ ಬಾಟಲ್ ಹಿಡಿದು ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತ ಪ್ರಕರಣ ನಡೆದಿದೆ.

ಗಾಂಧಿ ಜಯಂತಿ ದಿನವಾದ ನಿನ್ನೆ ಈ ಘಟನೆ ನಡೆದಿದೆ. ಕೈಯಲ್ಲಿದ್ದ ಪೆಟ್ರೋಲ್ ಬಾಟಲ್ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೇಳಿದರೂ ಪೊಲೀಸ್ ಅಧಿಕಾರಿ ನಿರಾಕರಿಸಿದರು. ಇದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು ಅದು ವೈರಲ್ ಆಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎಎಸ್ಐ ಎ ಆರ್ ವೆಂಕಟ ರೆಡ್ಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಜಮೀನು ವಿವಾದ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳನ್ನೆಲ್ಲಾ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ತಮ್ಮ ಹಿರಿಯರಿಗೆ ಸೇರಿದ ಜಮೀನನ್ನು ಪಡೆಯಲು ಇನ್ನೂ ಹೋರಾಟ ನಡೆಸುತ್ತಿರುವುದಾಗಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. 38 ಗುಂಟೆ ಜಮೀನಿನ ಮೇಲೆ ಸಿವಿಲ್ ಕೇಸ್ ಹೂಡಲಾಗಿದ್ದು ಅದಿನ್ನೂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಕಂದಾಯ ಮನವಿಯನ್ನು ಸಲ್ಲಿಸಿದರೂ ಕೂಡ ಡಿಸಿ ಅದನ್ನು ಸಹಾಯಕ ಕಮಿಷನರ್ ಗೆ ಕಳುಹಿಸಿದ್ದಾರೆ, ಅವರು ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ  ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತೆ ಶುಭಾ ಕಲ್ಯಾಣ್, ಕೇಸು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಶ್ರೀನಿವಾಸಪುರ ತಾಲ್ಲೂಕು ತಹಸಿಲ್ದಾರ್ ರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ನಾಳೆ ಸರ್ವೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

https://youtu.be/enQSeJ-6-IQ

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا