Urdu   /   English   /   Nawayathi

ರಫೇಲ್ ಒಪ್ಪಂದದಲ್ಲಿ ಐಎಎಫ್ ಪಾತ್ರವಿಲ್ಲ : ಧನೋವಾ

share with us

ನವದೆಹಲಿ: 03 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರತ ಮತ್ತು ಫ್ರಾನ್ಸ್ ನಡುವಣ 56 ಸಾವಿರ ಕೋಟಿ ರೂ. ವೆಚ್ಚದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಭಾರತೀಯ ವಾಯುಪಡೆಯ ಯಾವುದೇ ಪಾತ್ರವಿಲ್ಲ ಎಂದು ಐಎಎಫ್ ಮುಖ್ಯಸ್ಥ ಡಿ.ಎಸ್.ದನೋವಾ ಸ್ಪಷ್ಟಪಡಿಸಿದ್ದಾರೆ.

ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ನಡೆದ ವಾಯುಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ರಾನ್ಸ್‍ನ ಜೆಟ್ ವಿಮಾನ ತಯಾರಿಕಾ ಸಂಸ್ಥೆ ಡಸೌಲ್ಟ್, ರಿಲಯನ್ಸ್ ಸಂಸ್ಥೆಯನ್ನು ತನ್ನ ಸಹಭಾಗಿತ್ವ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ ಐಎಎಫ್‍ನ ಪಾತ್ರವಿಲ್ಲ ಎಂದರು.

ರಫೇಲ್ ಯುದ್ಧವಿಮಾನಗಳ ಅಗಾಧ ಸಾಮಥ್ರ್ಯವನ್ನು ಸಮರ್ಥಿಸಿಕೊಂಡು ಏರ್ ಚೀಫ್ ಮಾರ್ಷಲ್ ಇದು ಭಾರತಕ್ಕೆ ಬಂದರೆ ಏಷ್ಯಾ ಉಪಖಂಡದಲ್ಲಿ ಭಾರತಕ್ಕೆ ಭಾರೀ ಶಕ್ತಿ ವೃದ್ಧಿಯಾಗುತ್ತದೆ. ಇದೊಂದು ಮಹತ್ವದ ಪರಿವರ್ತನೆಯಾಗಲಿದೆ ಎಂದು ಹೇಳಿದರು. ರಫೇಲ್ ಒಪ್ಪಂದಗಳ ಕುರಿತ ವಿವಾದಗಳ ಬಗ್ಗೆ ಕೆದಕಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಈ ಯುದ್ಧ ವಿಮಾನಗಳಿಂದ ಭಾರತಕ್ಕೆ ಅದರಲ್ಲೂ ವಾಯುಪಡೆಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ. ಇದೊಂದು ಅತ್ಯುತ್ತಮ ವ್ಯವಹಾರ ಒಪ್ಪಂದ ಎಂದಷ್ಟೇ ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا