Urdu   /   English   /   Nawayathi

ಛತ್ತೀಸ್ಗಢದಲ್ಲಿ ಎನ್'ಕೌಂಟರ್; ಮೂವರು ನಕ್ಸಲರ ಹತ್ಯೆ

share with us

ರಾಯ್ಪುರ: 03 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಎನ್'ಕೌಂಟರ್ ನಡೆಸಿದ್ದು, ಮೂವರು ನಕ್ಸಲರನ್ನು ಹತ್ಯೆ ಮಾಡಿದ್ದಾರೆಂದು ಬುಧವಾರ ತಿಳಿದುಬಂದಿದೆ. 
ಮುಲೆರ್ ಗ್ರಾಮದಲ್ಲಿರುವ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿ ಕುಳಿತಿರುವ ಮಾಹಿತಿಗಳು ತಿಳಿದುಬಂದ ಹಿನ್ನಲೆಯಲ್ಲಿ ಜಿಲ್ಲಾ ಮೀಸಲು ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಈ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವ ಭಾರೀ ಗುಂಡಿನ ಕಾಳಗ ಆರಂಭವಾಗಿತ್ತು ಎಂದು ಸುಕ್ಮಾ ಎಸ್'ಪಿ ಅಭಿಷೇಕ್ ಮೀನಾ ಅವರು ಹೇಳಿದ್ದಾರೆ. 

ಕಾರ್ಯಾಚರಣೆ ಬಳಿಕ ಸ್ಥಳ ಪರಿಶೀಲನೆ ವೇಲೆ ಮೂವರು ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ 315 ಬೋರ್ ರೈಫಲ್, 4 ಮುಜಲ್ ಲೋಡಿಂಗ್ ಗನ್, 1 ಪೈಪ್ ಬಾಂಬ್ ಮತ್ತು ಇತರೆ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಹತ್ಯೆಯಾದ ನಕ್ಸಲರ ಕುರಿತಂತೆ ಮಾಹಿತಿಗಳು ಲಭ್ಯವಾಗಿಲ್ಲ. ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ ಎಂದಿದ್ದಾರೆ. 

ಕಾರ್ಯಾಚರಣೆ ವೇಳೆ ಓರ್ವ ನಕ್ಸಲ್'ನನ್ನು ಜೀವಂತವಾಗಿ ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا