Urdu   /   English   /   Nawayathi

36,668 ಕೋಟಿ ವೆಚ್ಚದ ಎಸ್-400 ಕ್ಷಿಪಣಿ ಪೂರೈಕೆಗೆ ರಷ್ಯಾ ಜೊತೆ ಭಾರತ ಒಪ್ಪಂದ

share with us

ಮಾಸ್ಕೋ/ನವದೆಹಲಿ: 03 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರತಕ್ಕೆ ರಷ್ಯಾ ಐದು ಶತಕೋಟಿ ಡಾಲರ್ (36,668 ಕೋಟಿ ರೂ.ಗಳ) ವೆಚ್ಚದ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಪೂರೈಸಲಿದ್ದು, ಮುಂದಿನ ವಾರ ಈ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದವಾಗಲಿದೆ. ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಅಮೆರಿಕ ನೀಡಿರುವ ಗಂಭೀರ ಎಚ್ಚರಿಕೆ ನಡುವೆಯೂ ಈ ಒಡಂಬಡಿಕೆಗೆ ಚಾಲನೆ ಲಭಿಸಿದೆ. ಇದರೊಂದಿಗೆ ರಷ್ಯಾದಿಂದ ಅತ್ಯಂತ ಪ್ರಬಲ ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದ ಕುರಿತು ತಲೆದೋರಿದ್ದ ಗೊಂದಲ ಬಗೆಹರಿದಂತಾಗಿದೆ. ಭಾರತ-ರಷ್ಯಾ ನಡುವಣ ಒಪ್ಪಂದ ನಂತರ ಅಮೆರಿಕ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಾಳೆ(ಅ.4) ರಷ್ಯಾ ಪ್ರವಾಸ ಕೈಗೊಳ್ಳಲಿದ್ದು, ನವದೆಹಲಿಯಲ್ಲಿ ಈ ಮಹತ್ವದ ಒಪ್ಪಂದದ ಸಹಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಷ್ಯಾ ಸಂಸತ್ತು ಕ್ರೆಮ್ಲಿನ್‍ನ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ರಷ್ಯಾ ಅಧ್ಯಕ್ಷರ ಭಾರತದ ಈ ಮಹತ್ವದ ಭೇಟಿಯು ನವದೆಹಲಿಗೆ ಎಸ್-400 (ಟ್ರಯಂಫ್ ಕ್ಷಿಪಣಿ) ವಾಯು ರಕ್ಷಣ ವ್ಯವಸ್ಥೆಯನ್ನು ಪೂರೈಸುವುದಕ್ಕಾಗಿ ಒಪ್ಪಂದಕ್ಕೆ ಸಹಿ ಮಾಡುವುದಾಗಿದೆ. ಈ ಒಪ್ಪಂದ ಒಟ್ಟು 5 ಶತಕೋಟಿ ಡಾಲರ್‍ಗಳಿಗೂ ಹೆಚ್ಚಿನ ಮೌಲ್ಯದ್ದಾಗಿದೆ ಎಂದು ಪುಟಿನ್ ಅವರ ವಿದೇಶಾಂಗ ನೀತಿಗಳ ಸಲಹೆಗಾರ ಯೂರಿ ಉಷಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟ್ರಯಂಪ್ ದೀರ್ಘ ಅಂತರದಲ್ಲಿರುವ ವೈರಿಗಳ ವಿಮಾನಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಅಗಾಧ ಸಾಮಥ್ರ್ಯದ ಭೂಮಿಯಿಂದ ಗಗನಕ್ಕೆ ಚಿಮ್ಮುವ ಪ್ರಬಲ ಕ್ಷಿಪಣಿಯಾಗಿದೆ. ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಅಮೆರಿಕ ತಾಕೀತು ಮಾಡಿತ್ತು. ಈ ವಿಷಯದಲ್ಲಿ ಮುಂದುವರಿದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ರಷ್ಯಾ ಜೊತೆ ರಕ್ಷಣಾ ವ್ಯವಹಾರ ನಡೆಸುವ ದೇಶಗಳ ವಿರುದ್ಧ ನಿರ್ಬಂಧ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್‍ನಲ್ಲಿ ಸೂಚನೆ ನೀಡಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا