Urdu   /   English   /   Nawayathi

Jet Airways: ಕಿವಿ-ಮೂಗಿಂದ ರಕ್ತ - ವಿಮಾನದಲ್ಲಿದ್ದ ಎಲ್ಲ 166 ಪ್ರಯಾಣಿಕರಿಗೆ ಉಚಿತ ಟಿಕೆಟ್‌ ನೀಡಿದ ಜೆಟ್‌ ಏರ್‌ವೇಸ್‌!

share with us

ಮುಂಬಯಿ: 03 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ವಿಮಾನದ ಏರ್‌ ಕ್ಯಾಬಿನ್ ಒತ್ತಡ ನಿರ್ವಹಿಸಲು ವಿಫಲವಾಗಿದ್ದ ಕಾರಣ ಇತ್ತೀಚೆಗಷ್ಟೇ ಜೆಟ್‌ ಏರ್‌ವೇಸ್‌ನ ಹಲವು ಪ್ರಯಾಣಿಕರ ಕಿವಿ ಮೂಗಿನಲ್ಲಿ ರಕ್ತ ಸುರಿದಿತ್ತು. ಈಗ, ಈ ಪ್ರಯಾಣಿಕರ ಮೂಗಿಗೆ ತುಪ್ಪ ಸವರಲು ಹೊರಟಿರುವ ವಿಮಾನಯಾನ ಸಂಸ್ಥೆ ಆ ವಿಮಾನದಲ್ಲಿ ಪ್ರಯಾಣಿಸಿದ್ದ ಎಲ್ಲ 166 ಜನರಿಗೆ ಉಚಿತ ಕಾಂಪ್ಲಿಮೆಂಟರಿ ಟಿಕೆಟ್ ಹಾಗೂ ವಿಮಾನ ಪ್ರಯಾಣದ ಅನೇಕ ಪ್ರಯೋಜನಗಳನ್ನು ನೀಡಿದೆ. ಸೆಪ್ಟೆಂಬರ್ 27ರಂದೇ ಮುಂಬಯಿಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನದಲ್ಲಿ ತೆರಳಿದ್ದ 166 ಪ್ರಯಾಣಿಕರಿಗೆ ಜೆಟ್‌ ಏರ್‌ವೇಸ್‌ ಸಂಸ್ಥೆ ಇ - ಮೇಲ್ ಮೂಲಕ ಕಾಂಪ್ಲಿಮೆಂಟರಿ ಟಿಕೆಟ್ ಹಾಗೂ ವಿಮಾನ ಪ್ರಯಾಣದ ಬೆನಿಫಿಟ್‌ಗಳನ್ನು ನೀಡಿದೆ. ಮಾರ್ಚ್ 31,2019ರವರೆಗೆ ಸಂಬಂಧಪಟ್ಟ ಪ್ರಯಾಣಿಕರು ಅಥವಾ ಬೇರೊಬ್ಬ ಫಲಾನುಭವಿಯ ಹೆಸರು ಸೂಚಿಸುವಂತೆ ಮೇಲ್‌ನಲ್ಲಿ ತಿಳಿಸಿದೆ. ಜತೆಗೆ, ಹೆಚ್ಚು ವಿಮಾನದಲ್ಲಿ ಸಂಚರಿಸುವ ಫಲಾನುಭವಿಗಳ ಅಕೌಂಟ್‌ಗೆ 25 ಸಾವಿರ ಜೆಟ್ ಪ್ರಿವಿಲೇಜ್ ಮೈಲ್ಸ್ ನೀಡಿದೆ. ಇದರಿಂದ ಪ್ರಯಾಣಿಕರು ಅನೇಕ ಪ್ರಯೋಜನ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಲ್ಲದೆ, ಸೆಪ್ಟೆಂಬರ್ 20ರಂದು ನಡೆದಿದ್ದ ಘಟನೆಗೆ ಕ್ಷಮೆ ಕೋರಿರುವ ಸಂಸ್ಥೆ, ''ಪ್ರಯಾಣಿಕರ ಕ್ಯಾಬಿನ್‌ನಲ್ಲಾದ ಘಟನೆ ದುರದೃಷ್ಟಕರ. ಈ ಬಗ್ಗೆ ಪ್ರಯಾಣಿಕರು ನಿರಾಶೆ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. ವಿಮಾನವು ಮುಂಬಯಿಗೆ ಸುರಕ್ಷಿತವಾಗಿ ಲ್ಯಾಂಡ್ ಆಯ್ತು. ಆದರೆ, ಕೆಲ ಪ್ರಯಾಣಿಕರ ಮೂಗು, ಕಿವಿಗೆ ತೊಂದರೆಗಳಾದವು'' ಎಂದು ಇ - ಮೇಲ್ ಮಾಡಿದೆ. 

ನರೇಶ್‌ ಗೋಯಲ್ ಒಡೆತನದ ಜೆಟ್‌ ಏರ್‌ವೇಸ್‌ ಸಂಸ್ಥೆ ಇತ್ತೀಚೆಗೆ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಾಗುತ್ತಿದೆ. ಇನ್ನು, ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಸೋರಿದ ಪ್ರಕರಣದ ಬಳಿಕ ಜೆಟ್‌ ಏರ್‌ವೇಸ್‌ನ ತರಬೇತಿ ಕಾರ್ಯಕ್ರಮಗಳ ಬಗ್ಗೆ ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ ತಪಾಸಣೆ ನಡೆಸುತ್ತಿದೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا