Urdu   /   English   /   Nawayathi

4 ತಿಂಗಳಲ್ಲಿ 18,000 ಕೋಟಿ ರೂ. ಬ್ಲಾಕ್ ಮನಿ ಘೋಷಿಸಿದ ಗುಜರಾತಿಗಳು .!

share with us

ಅಹಮದಾಬಾದ್: 02 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆದಾಯ ಘೋಷಣೆ ಯೋಜನೆ(ಐಡಿಎಸ್)ಯಡಿ ಗುಜರಾತಿಗಳು ನಾಲ್ಕು ತಿಂಗಳುಗಳಲ್ಲಿ 18,000 ಕೋಟಿ ರೂ.ಗಳ ಕಾಳಧನ(ಬ್ಲಾಕ್ ಮನಿ) ಘೋಷಿಸಿದ್ದಾರೆ. ದೇಶಾದ್ಯಂತ ಬಹಿರಂಗಗೊಂಡ ಅಘೋಷಿತ ಕಪ್ಪುಹಣದಲ್ಲಿ ಇದು ಶೇ.29ರಷ್ಟು.  ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಹಳೆ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯೀಕರಣಗೊಳಿಸುವುದಕ್ಕೆ ಮುನ್ನ ಅಂದರೆ 2016ರ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಗುಜರಾತಿಗಳು ಐಡಿಎಸ್ ಅಡಿ 18,000 ಕೋಟಿ ರೂ.ಗಳ ಅಘೋಷಿತ ಹಣವನ್ನು ಘೋಷಣೆ ಮಾಡಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ(ಆರ್‍ಟಿಐ) ಅಡಿ ಈ ಸಂಬಂಧ ಕೋರಲಾಗಿದ್ದ ಅರ್ಜಿಯೊಂದಕ್ಕೆ ವಿವರ ಒದಗಿಸಿರುವ ಆದಾಯ ತೆರಿಗೆ(ಐಟಿ) ಇಲಾಖೆ, ಈ ಮೊತ್ತವು ಯೋಜನೆಯಡಿ ಘೋಷಿಸಲ್ಪಟ್ಟ ಒಟ್ಟು 65,250 ಕೋಟಿ ರೂ.ಗಳ ಕಾಳಧನ ಮೊತ್ತದಲ್ಲಿ ಶೇ.29ರಷ್ಟು ಎಂದು ತಿಳಿಸಿದೆ. ಗುಜರಾತ್‍ನ ರಿಯಲ್ ಎಸ್ಟೇಟ್ ಕುಳ ಮಹೇಶ್ ಶಾ ತಮ್ಮ 13,860 ಕೋಟಿ ರೂ.ಗಳ ಅಕ್ರಮ ಅದಾಯವನ್ನು ಘೋಷಿಸುವುದಕ್ಕೆ ಮುನ್ನವೇ ಗುಜರಾತ್‍ನಲ್ಲಿ 18.000 ಬ್ಲಾಕ್ ಮನಿ ಬಹಿರಂಗವಾಗಿದೆ ಎಂದು ಐಟಿ ಮಾಹಿತಿ ನೀಡಿದೆ.

ಅಹಮದಾಬಾದ್ ಮೂಲದ ಪ್ರಾಪರ್ಟಿ ಡೀಲರ್ ಮಹೇಶ್ ಶಾ 13,860 ಕೋಟಿ ರೂ.ಗಳ ಅಕ್ರಮ ಧನವನ್ನು ಘೋಷಿಸಿದ ನಂತರ, ಗುಜರಾತ್‍ನಲ್ಲಿ ಬಹಿರಂಗಗೊಂಡಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡುವಂತೆ 2016ರ ಡಿಸೆಂಬರ್ 21ರಂದು ಭರತ್ ಸಿನ್ಹಾ ಝಾಲ ಅವರು ಆರ್‍ಟಿಐ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಮಾಹಿತಿಗಳನ್ನು ಕಲೆ ಹಾಕಲು ಆದಾಯ ತೆರಿಗೆ ಅಧಿಕಾರಿಗಳಿಗೆ ಎರಡು ವರ್ಷ ಬೇಕಾಯಿತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا