Urdu   /   English   /   Nawayathi

ಇಂಡೋನೆಷ್ಯಾದಲ್ಲಿ ಇಂದು ಮತ್ತೆ ಭೂಕಂಪ..! ಏರುತ್ತಲೇ ಇದೆ ಸುನಾಮಿಯಿಂದ ಸತ್ತವರ ಸಂಖ್ಯೆ

share with us

ಜಕಾರ್ತ: 02 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಪಾರ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾದ ಭಾರೀ ಭೂಕಂಪ ಮತ್ತು ಸುನಾಮಿಯಿಂದ ಇಂಡೋನೆಷ್ಯಾ ತತ್ತರಿಸಿರುವಾಗಲೇ, ದ್ವೀಪರಾಷ್ಟ್ರದ ಸುಂಬಾ ದ್ವೀಪದಲ್ಲಿ ಇಂದು ಬೆಳಗ್ಗೆ 5.9ರ ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ದ್ವೀಪವಾಸಿಗಳು ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ. ಭೂಕಂಪ ಮತ್ತು ಸುನಾಮಿಯಿಂದ ಸುಲವೇಸಿ ದ್ವೀಪದ ಪಲು ಪಟ್ಟಣದಲ್ಲಿ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. ಸುಲವೇಸಿ ದ್ವೀಪದ ದಕ್ಷಿಣಕ್ಕೆ 1,600 ಕಿ.ಮೀ. ದೂರದ ಸುಂಬಾ ದ್ವೀಪದಲ್ಲಿ ಭೂಕಂಪ ಸಂಭವಿಸಿದೆ.

ಸುಮಾರು 7.50 ಲಕ್ಷ ಜನರಿರುವ ಈ ಪ್ರದೇಶದ 40 ಕಿ.ಮೀ. ವ್ಯಾಪ್ತಿಯಾಗಿ ಭೂನಡುಕದ ಅನುಭವವಾಗಿದೆ. ಭೂಗರ್ಭದ 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು. ಏರುತ್ತಲೇ ಇರುವ ಸಾವಿನ ಸಂಖ್ಯೆ : ಈ ಮಧ್ಯ ಸುಲವೇಸಿ ದ್ವೀಪ ಪ್ರಾಂತ್ಯದ ಪಲು ಪಟ್ಟಣದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪ ಮತ್ತು ಸುನಾಮಿಯಿಂದ ಸತ್ತವರ ಸಂಖ್ಯೆ ಏರುತ್ತಲೇ ಇದೆ. ಭೂಮಿ ಒಳಗೆ ಹುದುಗಿ ಹೋಗಿದ್ದ ಚರ್ಚ್ ಒಂದರ ಅವಶೇಷಗಳಿಂದ ಅನೇಕ ವಿದ್ಯಾರ್ಥಿಗಳ ಶವಗಳನ್ನು ಹೊರತೆಗೆಯಾಗಿದೆ.

ಪ್ರಕೃತಿ ವಿಕೋಪದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದು ಅವರಿಗೆ ಪರಿಹಾರ ಕಲ್ಪಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಅಂತಾರಾಷ್ಟ್ರೀಯ ನೆರವು ಕೋರಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا