Urdu   /   English   /   Nawayathi

ಚೀನಾದ ಸಿಲ್ಕ್ ರೋಡ್ ಯೋಜನೆಯ ಗಾತ್ರಕ್ಕೆ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನದಿಂದ ಕತ್ತರಿ!

share with us

ಇಸ್ಲಮಾಬಾದ್: 02 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಚೀನಾ-ಪಾಕಿಸ್ತಾನ ದೇಶಗಳ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಯ ಭಾಗವಾಗಿರುವ ರೈಲು ಯೋಜನೆಯ ಗಾತ್ರವನ್ನು  ಪಾಕಿಸ್ತಾನ ಕಡಿಮೆ ಮಾಡಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಸಿಲ್ಕ್ ರೋಡ್ ಯೋಜನೆ ಭಾಗವಾಗಿರುವ ರೈಲು ಯೋಜನೆಯ ಗಾತ್ರವನ್ನು 8.2 ಬಿಲಿಯನ್ ಡಾಲರ್ ನಿಂದ 6.2 ಬಿಲಿಯನ್ ಗೆ ಇಳಿಕೆ ಮಾಡಿದೆ. ಅಂದರೆ ಬರೊಬ್ಬರಿ 2 ಬಿಲಿಯನ್ ಡಾಲರ್ ಮೊತ್ತವನ್ನು ಇಳಿಕೆ ಮಾಡಿದೆ. 

ಕರಾಚಿಯಿಂದ ಪೇಷಾವರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 1,872 ಕಿಮೀ ಮಾರ್ಗದ ರೈಲು ಯೋಜನೆಗೆ 8.2 ಬಿಲಿಯನ್ ಡಾಲರ್ ಮೊತ್ತ ಖರ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. 

ಆದರೆ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಮತ್ತೆ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದೆ. "ಪಾಕಿಸ್ತಾನ ಬಡ ರಾಷ್ಟ್ರವಾಗಿದ್ದು, ಹೆಚ್ಚಿನ ಸಾಲದ ಹೊರೆಯನ್ನು ಹೊತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಹೇಳಿದ್ದಾರೆ. 

ಸಾಲದ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಸಿಪಿಇಸಿ ಯೋಜನೆಯಡಿಯಲ್ಲಿ ರೈಲು ಯೋಜನೆಗಳಿಗಾಗಿ ಚೀನಾದಿಂದ ಪಡೆಯುವ ಸಾಲದ ಮೊತ್ತವನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇವೆ ಎಂದು ಪಾಕ್ ರೈಲ್ವೆ ಸಚಿವರು ಹೇಳಿದ್ದಾರೆ. 

ಕರಾಚಿ-ಪೇಷಾವರ ಮಾರ್ಗದ ಲೈನ್-1 ರೈಲ್ವೆ ಯೋಜನೆಗೆ ಪಾಕಿಸ್ತಾನ ಈಗಲೂ ಬದ್ಧವಾಗಿದೆ ಎನ್ನುತ್ತಲೇ ಪಾಕಿಸ್ತಾನದ ಸಚಿವರು ಸಾಲದ ಮೊತ್ತವನ್ನು 4.2 ಬಿಲಿಯನ್ ಡಾಲರ್ ಗೆ ಇಳಿಕೆ ಮಾಡುವ ಸೂಚನೆ ನೀಡಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا