Urdu   /   English   /   Nawayathi

ಅಮೆರಿಕದ ಮೇಲೆ ನಂಬಿಕೆ ಹುಟ್ಟದ ಹೊರತು ನಿಶ್ಶಸ್ತ್ರೀಕರಣವಿಲ್ಲ: ಉತ್ತರ ಕೊರಿಯಾ ನೇರನುಡಿ

share with us

ನ್ಯೂಯಾರ್ಕ್‌: 01 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕದ ಮೇಲೆ ನಂಬಿಕೆ ಹುಟ್ಟದ ಹೊರತು ತಾನು ನಿಶ್ಶಸ್ತ್ರೀಕರಣ ಮಾಡುವುದಿಲ್ಲ ಎಂದು ಉತ್ತರ ಕೊರಿಯಾ ನೇರವಾಗಿ ಅಮೆರಿಕಕ್ಕೆ ಟಾಂಗ್ ನೀಡಿದೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕೇಂದ್ರದಲ್ಲಿ ನಡೆಯುತ್ತಿರುವ ಮಹಾಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಉತ್ತರ ಕೊರಿಯಾದ ವಿದೇಶ ಸಚಿವ ರಿ ಯೊಂಗ್ ಹೊ ಅವರು, ಅಮೆರಿಕ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಶಾಂತಿ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಅಮೆರಿಕದ ಕ್ರಮಗಳು ವಿಶ್ವಾಸ ನಿರ್ಮಾಣಕ್ಕೆ ವ್ಯತಿರಿಕ್ತವಾಗಿವೆ. ಅಮೆರಿಕದ ಮೇಲೆ ಸಂಪೂರ್ಣ ನಂಬಿಕೆ ಮೂಡದ ಹೊರತು ತಾನು ಸಂಪೂರ್ಣ ನಿಶ್ಶಸ್ತ್ರೀಕರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ 'ನಮ್ಮ ದೇಶದ ವಿರುದ್ಧದ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಮುಂದುವರಿಸುವುದಾಗಿ ಹೇಳುವ ಮೂಲಕ, ಕೊರಿಯಾ ಪರ್ಯಾಯ ದ್ವೀಪದಲ್ಲಿನ ಶಾಂತಿ ಪ್ರಯತ್ನಗಳಿಗೆ ಅಮೆರಿಕ ತಡೆಯೊಡ್ಡುತ್ತಿದೆ. ಉತ್ತರ ಕೊರಿಯಾದ ವಿರುದ್ಧದ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಮುಂದುವರಿಸುವಷ್ಟು ಸಮಯ ನನ್ನ ದೇಶ ನಿಶ್ಶಸ್ತ್ರೀಕರಣದಲ್ಲಿ ಭಾಗಿಯಾಗುವ ಯಾವುದೇ ಸಾಧ್ಯತೆಯಿಲ್ಲ. ಹೀಗಾಗಿ ನಮ್ಮ ರಾಷ್ಟ್ರೀಯ ಭದ್ರತೆಯಲ್ಲಿ ಯಾವುದೇ ಹೊಂದಾಣಿಕ ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ, ನಾವು ಏಕಪಕ್ಷೀಯವಾಗಿ ಮೊದಲು ನಿಶ್ಶಸ್ತ್ರೀಕರಣಗೊಳ್ಳುವ ಯಾವುದೇ ಸಾಧ್ಯತೆಯಿಲ್ಲ ಎಂದು ರಿ ಯೊಂಗ್ ಹೊ ಸ್ಪಷ್ಟಪಡಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا