Urdu   /   English   /   Nawayathi

ಧಾನಿ ಮೋದಿ ವಿರುದ್ಧ ಕಿಡಿ ಕಾರಿದ ಕೇಜ್ರಿವಾಲ್

share with us

ನವದೆಹಲಿ: 30 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರಕಾರ 2003ರ ವಿದ್ಯುತ್ ವಿಧೇಯಕದ ತಿದ್ದುಪಡಿಗೆ ಮುಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೆಚ್ಚಿನ ಕೆಲ ಖಾಸಗಿ ಸಂಸ್ಥೆಗಳಿಗೆ ಸಹಾಯ ಮಾಡಲು ಈ ವಿಧೇಯಕ ತರಲು ಮಂದಾಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ, ಈಗಾಗಲೇ ಮಂಡಿಸಲು ಉದ್ದೇಶಿಸಿರುವ ಕರಡು ವಿಧೇಯಕವನ್ನು ಎಲ್ಲ ರಾಜ್ಯಗಳಿಗೆ ರವಾನಿಸಲಾಗಿದೆ. ಒಂದು ವೇಳೆ ಈ ವಿಧೇಯಕ ತಿದ್ದುಪಡಿಯಾದರೆ, ಖಾಸಗಿ ಸಂಸ್ಥೆಗಳಿಗೆ ನೆರವಾಗಲು ವಿದ್ಯುತ್ ದರ ಏರಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಮೋದಿ ಅವರು ಖಾಸಗಿ ಸಂಸ್ಥೆಗಳಿಂದ ಕಿಕ್ ಬ್ಯಾಕ್ ಪಡೆಯಲು ಇದನ್ನು ತರಲು ಹೊರಟಿದ್ದಾರೆ. ಆದ್ದರಿಂದ ಈ ತಿದ್ದುಪಡಿ ಬಗ್ಗೆ ಬಿಜೆಪಿಯೇತರ ಸರಕಾರವಿರುವ ರಾಜ್ಯ ಸರಕಾರದೊಂದಿದೆ ಚರ್ಚಿಸಲಾಗುವುದು ಎಂದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا