Urdu   /   English   /   Nawayathi

ಇಂಡೋನೆಷ್ಯಾ ಭೂಕಂಪ, ಸುನಾಮಿ ರುದ್ರನರ್ತನದಲ್ಲಿ ಸತ್ತವರ ಸಂಖ್ಯೆ 838ಕ್ಕೇರಿಕೆ..!

share with us

ಜಕಾರ್ತ: 30 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ದ್ವೀಪರಾಷ್ಟ್ರ ಇಂಡೋನೆಷ್ಯಾದ ಸುಲವೇಸಿ ದ್ವೀಪ ಪ್ರಾಂತ್ಯದ ಮೇಲೆ ಬಂದೆರಗಿದ ವಿನಾಶಕಾರಿ ಭೂಕಂಪ ಮತ್ತು ಸುನಾಮಿಯಿಂದಾಗಿ ಮೃತಪಟ್ಟವರ ಸಂಖ್ಯೆ ೮೮೩ಕ್ಕೇರಿದೆ.ಈ ಭೀಕರ ಪ್ರಕೃತಿ ವಿಕೋಪದಲ್ಲಿ ನೂರಾರು ಜನರು ತೀವ್ರ ಗಾಯಗೊಂಡಿದ್ದು, ಕೆಲವರು ಕಣ್ಮರೆಯಾಗಿದ್ದಾರೆ. ಇದರಿಂದ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಸುಲವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪ ಹಾಗೂ ಆನಂತರ ಅಪ್ಪಳಿಸಿದ ಸುನಾಮಿ ಅಲೆಗಳಿಂದಾಗಿ ಸಾವು-ನೋವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಇದಾದ ನಂತರ 1.5 ಮೀಟರ್‍ಗಳ ಗರಿಷ್ಠ ಎತ್ತರಕ್ಕೆ ಸುನಾಮಿ ದೈತ್ಯ ಅಲೆಗಳು ಸುಮಾರು 3.50 ಲಕ್ಷ ಜನಸಂಖ್ಯೆ ಇರುವ ಸುಲವೇಸಿ ದ್ವೀಪದ ಪಲು ಪಟ್ಟಣದ ಮೇಲೆ ಅಪ್ಪಳಿಸಿತು. ಡೊಂಗಲಾ ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ.

ಭಗ್ನಾವಶೇಷಗಳ ಅಡಿ ಸಿಲುಕಿರುವವರ ಶೋಧ ಮುಂದುವರಿದಿದೆ. ಅನೇಕ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗಿದೆ.

ನರೇಂದ್ರ ಮೋದಿ ಸಂತಾಪ: ಇಂಡೋನೆಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಸಾವು ನೋವು ಸಂಭವಿಸಿರುವ ಬಗ್ಗೆ ದೆಹಲಿಯಲ್ಲಿ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಕಷ್ಟದಲ್ಲಿರುವ ದ್ವೀಪರಾಷ್ಟ್ರಕ್ಕೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا