Urdu   /   English   /   Nawayathi

6 ತಿಂಗಳಷ್ಟೇ ಎಂದಿದ್ದ ಇಸ್ರೋ ಮಂಗಳಯಾನ 4 ವರ್ಷ ಪೂರೈಸಿ, ಮುಂದಡಿಯಿಟ್ಟಿದೆ!

share with us

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2013ರ ನವೆಂಬರ್‌ 5ರಂದು ಮಂಗಳಯಾನ (Mars Orbiter MissionMOM) ಆರಂಭಿಸುವ ಮೂಲಕ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದ ದಿನವದು. ಅಂದು ಹೊರಟ ಯಾತ್ರೆ ಮಂಗಳ ಗ್ರಹವನ್ನು ತಲುಪಿದ್ದು ಸೆಪ್ಟಂಬರ್‌ 4, 2014ರಂದು. ಮೊದಲ ಬಾರಿಗೆ ಮಂಗಳ ಗ್ರಹವನ್ನು ಸುತ್ತಲು ಆರಂಭಿಸಿದಾಗ 6 ತಿಂಗಳ ಕಾಲ ಮಾತ್ರ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದರು. 

ಆದರೆ ಮಾಮ್‌ 4 ವರ್ಷ ಪೂರೈಸಿ ಮುಂದಡಿಯಿಡುತ್ತಿದೆ. ಮಂಗಳ ಗ್ರಹದ ಅಚ್ಚರಿ ಅಂಶಗಳನ್ನು ಭೂಮಿಗೆ ತಲುಪಿಸುತ್ತಲೇ ಇದೆ. ಕೇವಲ 6 ತಿಂಗಳು ಕಾರ್ಯ ನಿರ್ವಹಿಸಬಲ್ಲದು ಎಂದು ಅಂದಾಜಿಸಿದ್ದ ಮಾಮ್‌ನ ದೀರ್ಘಾವಧಿ ಕಾರ್ಯ ನಿರ್ವಹಣೆಯನ್ನು ಗಮನಿಸುತ್ತಿರುವ ಜಗತ್ತು ಅಚ್ಚರಿ ವ್ಯಕ್ತಪಡಿಸುತ್ತಿದೆ. ಇದು ಸಾಧ್ಯವಾಗಿದ್ದು ಉಪಗ್ರಹದ ಸಂಪೂರ್ಣ ಸ್ವಾಯತ್ತತೆ ಸಾಮರ್ಥ್ಯದಿಂದ. ಬಹಳ ಪೂರ್ವನಿಯೋಜಿತ ಕಾರ್ಯತಂತ್ರದಿಂದ ಮಾಮ್‌ ಉಪಗ್ರಹವನ್ನು ಸಿದ್ಧಪಡಿಸಿದ ಇಸ್ರೋ ಬಗ್ಗೆ ಮತ್ತೆ ಜಗತ್ತು ಚಪ್ಪಾಳೆ ತಟ್ಟುತ್ತಿದೆ. 

View image on Twitter

ISRO✔@isroOn the occasion of 4-year completion of @MarsOrbiter, Chairman Dr K Sivan released 3rd year observations of the payload today. Lots of exciting content available. For data download and registration details, visit ISSDC website: https://mrbrowse.issdc.gov.in/MOMLTA @PIB_India

7:06 PM - Sep 26, 2018

View image on Twitter

ISRO✔@isro


Ahead of set for early 2019 launch, a Lunar Science Meet was held today with scientists from research institutes, colleges and @isro centres brainstorming on different topics. Chairman Dr K Sivan hoped for a robust planetary science community.

9:08 PM - Sep 27, 2018

ಆಗಾಗ ಶಕ್ತಿಯನ್ನು ಸಂರಕ್ಷಿಸಲು ಸಾಧ್ಯವಾಗುವ ಹೈಬರ್ನೇಷನ್‌ ಮೋಡ್‌ಗೆ ಹೋಗುವ ಮಾಮ್‌ ಯಾವುದೇ ಆಸಕ್ತಿಕರ ಅಂಶ ಪತ್ತೆಯಾದರೂ ತಕ್ಷಣ ಎಂದು ಫೋಟೋ ತೆಗೆದು ಭೂಮಿಗೆ ರವಾನಿಸುತ್ತಿದೆ. 

ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ಸಿದ್ಧತೆ 

ಈ 4 ವರ್ಷಗಳ ಅವಧಿಯಲ್ಲಿ ಮಾಮ್‌ ಸಾಕಷ್ಟು ದಾಖಲೆಗಳನ್ನು ಮುರಿದಿದೆ. ಗಮನಾರ್ಹ ವಿಚಾರವೆಂದರೆ ಗ್ರಹದ ಸಂಪೂರ್ಣ ಡಿಸ್ಕ್‌ ಅನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿಯುವ ಸಾಮರ್ಥ್ಯವಿರುವುದು ಮಾಮ್‌ಗೆ ಮಾತ್ರ. ಮಂಗಳ ಗ್ರಹದ ಚಂದ್ರ ಡೀಮೋಸ್‌ ಚಿತ್ರವನ್ನು ಮಾಮ್‌ನ ಕ್ಯಾಮರಾ ಕಣ್ಣುಗಳು ಸೆರೆ ಹಿಡಿದಿವೆ. 

ಇದುವರೆಗೆ ಮಾಮ್‌ ಸುಮಾರು 890 ಚಿತ್ರಗಳನ್ನು ಇಸ್ರೋಗೆ ಕಚೇರಿಗೆ ಕಳುಹಿಸಿಕೊಟ್ಟಿದೆ. ಇದರಲ್ಲಿ ಕೆಂಪು ಗ್ರಹ ಮತ್ತು ಅದರ ಸುತ್ತಲಿನ ಕೌತಕ ವಿಚಾರಗಳನ್ನು ಭಾರತೀಯ ವಿಜ್ಞಾನಿಗಳಿಗೆ ತಲುಪಿಸಿದೆ. ( ಮಂಗಳನ ಮಣ್ಣಿನಲ್ಲಿ ವಿಷ) 

ಮತ್ತಷ್ಟು ವರ್ಷಗಳನ್ನು ಮಾಮ್‌ ಪೂರೈಸಲಿ, ಭಾರತೀಯ ಬಾಹ್ಯಾಕಾಶ ಸಂಶೋಧನೆ ಹೊಸ ಮೈಲುಗಲ್ಲು ಸಾಧಿಸಲಿ ಎಂಬುದು ನಮ್ಮ ಹಾರೈಕೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا