Urdu   /   English   /   Nawayathi

ಮಹಮ್ಮದ್‌ ಸಮೀರ್‌ ಕೊಲೆ ಪ್ರಕರಣ: ತನಿಖೆ ಚುರುಕು

share with us

ಎಡಪದವು: 29 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಗಂಜಿಮಠದ ಬಡಗುಳಿಪಾಡಿ ನಿವಾಸಿ ಮಹಮ್ಮದ್‌ ಸಮೀರ್‌ (35) ಅವರ ನಿಗೂಢ ಸಾವಿನ ಪ್ರಕರಣದ ಬೆನ್ನು ಹತ್ತಿದ ತಮಿಳು ನಾಡಿನ ದೇವತಾನಪಟ್ಟಿ ಪೊಲೀಸರಿಗೆ ಕೆಲವು ಸ್ಫೋಟಕ ಮಾಹಿತಿಗಳು ಸಿಕ್ಕಿವೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವುದಕ್ಕೆ ಆ ಮಾಹಿತಿಗಳು ಪೂರಕವಾಗಿವೆ.
ಕತ್ತು ಸೀಳಿ ಕೊಲೆ?
ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮೇಲ್ನೋಟಕ್ಕೆ ಇಬ್ಬರು ಸೇರಿ ಮಾರಕಾಯುಧಳಿಂದ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಶವದ ಕತ್ತಿನಲ್ಲಿ ಚೂರಿಯಿಂದ ಸೀಳಿದ ಗುರುತು ಪತ್ತೆಯಾಗಿತ್ತು. ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿರುವ ಆತನ ಪತ್ನಿ ¦ÜZÉÆÃÐ¸Ï ಹಾಗೂ ಆಕೆಯ ಪ್ರಿಯಕರ ಎನ್ನಲಾದ ಕಾರ್ಕಳದ ಆಸಿಫ್ ಅವರು ವ್ಯವಸ್ಥಿತವಾಗಿ ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಗಲ್ಫ್ನಿಂದ ಬಂದಿದ್ದ ಸಮೀರ್‌ನಲ್ಲಿ ಪತ್ನಿ ಬೆಂಗಳೂರಿಗೆ ಪ್ರವಾಸಕ್ಕೆ ತೆರಳುವ ಬಗ್ಗೆ ಪ್ರಸ್ತಾಪಿಸಿ, ತನ್ನ ಪುಟಾಣಿ ಮಗುವಿನ ಜತೆಗೆ ಸೆ.13ರಂದು ಬೆಂಗಳೂರಿಗೆ ಹೋಗಿ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. ಸುತ್ತಾಟಕ್ಕಾಗಿ ಕ್ಯಾಬ್‌ ಬುಕಿಂಗ್‌ ಮಾಡಲು ಮುಂದಾಗಿದ್ದಾರೆನ್ನಲಾಗಿದೆ.
ಪ್ರಿಯತಮನ ಕ್ಯಾಬ್‌ನಲ್ಲಿ ಸಂಚಾರ
ಫಿರ್ದೋಸ್ನ ಪ್ರಿಯತಮ ಬೆಂಗಳೂರಿನಲ್ಲಿ ಕ್ಯಾಬ್‌ ಡ್ರೈವರ್‌ ಆಗಿರುವುದರಿಂದ ಆತನ ಕಾರನ್ನೇ ಬಳಸಿರುವ ಸಾಧ್ಯತೆ ಇದೆ. ಸಮೀರ್‌ಗೆ ಅವರಿಬ್ಬರ ಪ್ರೇಮ ವ್ಯವಹಾರ ಗೊತ್ತಿರಲಿಲ್ಲ ಎನ್ನಲಾಗಿದೆ. ಸೆ.14ರಂದು ದಂಪತಿ ರೂಂ ಖಾಲಿ ಮಾಡಿರುವುದು ಲಾಡಿjನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸೆ.15ರಂದು ಕೊಡೈಕನಾಲ್‌ ಹೋಗುವ ರಸ್ತೆಯಲ್ಲಿ ಸಮೀರ್‌ ಶವ ಪತ್ತೆಯಾಗಿತ್ತು.
ಇಬ್ಬರೂ ಸೇರಿ ಸಮೀರ್‌ನ ಕತ್ತಿಗೆ ಇರಿದು ಕೊಂದು ಕೊಡೈಕನಾಲ್‌ ರಸ್ತೆ ಬದಿಯ ಕಂದಕಕ್ಕೆ ಬಿಸಾಡಲು ಮುಂದಾಗಿದ್ದು, ಯಾವುದೋ ಕಾರಣಕ್ಕೆ ವಿಫ‌ಲವಾಗಿ ರಸ್ತೆ ಬದಿಯಲ್ಲಿ ಎಸೆದು ಕಾರಿನಲ್ಲಿ ಪರಾರಿಯಾಗಿರಬೇಕು. ಶವ ಕಂದಕಕ್ಕೆ ಬಿದ್ದಿದ್ದರೆ ಸಮೀರ್‌ ಸಾವು ನಿಗೂಢವಾಗಿಯೇ ಉಳಿಯುವ ಸಾಧ್ಯತೆಯಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಫಿರ್ದೋಸ್ ಹಾಗೂ ಆಸಿಫ್ ಅಪಾರ ನಗ-ನಗದಿನ ಜತೆಯಲ್ಲಿ ನಾಪತ್ತೆಯಾಗಿರುವುದು ಅವರ ಮೇಲಿನ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪೊಲೀಸರ ವಿಶ್ವಾಸ
ಬಜಪೆ ಪೊಲೀಸರು ದೇವತಾನಪಟ್ಟಿ ಪೊಲೀಸರಿಗೆ ಸಹಕಾರ ನೀಡಿದ್ದು, ಮಹತ್ವದ ದಾಖಲೆಗಳನ್ನು ಒದಗಿಸಿದ್ದಾರೆ. ತಮಿಳುನಾಡು ಪೊಲೀಸರು ಪೋಸ್ಟ್‌ ಮಾರ್ಟಂ ವರದಿಗೆ ಕಾಯುತ್ತಿದ್ದು, ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿಯಲ್ಲಿ ಅಸ್ಪಷ್ಟ ದೃಶ್ಯ

ಎಡಪದವು: ಗಂಜಿಮಠದ ಬಡಗುಳಿಪಾಡಿ ನಿವಾಸಿ ಮಹಮ್ಮದ್‌ ಸಮೀರ್‌ (35) ಅವರ ನಿಗೂಢ ಸಾವಿನ ಪ್ರಕರಣದ ಬೆನ್ನು ಹತ್ತಿದ ತಮಿಳು ನಾಡಿನ ದೇವತಾನಪಟ್ಟಿ ಪೊಲೀಸರಿಗೆ ಕೆಲವು ಸ್ಫೋಟಕ ಮಾಹಿತಿಗಳು ಸಿಕ್ಕಿವೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವುದಕ್ಕೆ ಆ ಮಾಹಿತಿಗಳು ಪೂರಕವಾಗಿವೆ.
ಕತ್ತು ಸೀಳಿ ಕೊಲೆ?
ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮೇಲ್ನೋಟಕ್ಕೆ ಇಬ್ಬರು ಸೇರಿ ಮಾರಕಾಯುಧಳಿಂದ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಶವದ ಕತ್ತಿನಲ್ಲಿ ಚೂರಿಯಿಂದ ಸೀಳಿದ ಗುರುತು ಪತ್ತೆಯಾಗಿತ್ತು. ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿರುವ ಆತನ ಪತ್ನಿ ¦ÜZÉÆÃÐ¸Ï ಹಾಗೂ ಆಕೆಯ ಪ್ರಿಯಕರ ಎನ್ನಲಾದ ಕಾರ್ಕಳದ ಆಸಿಫ್ ಅವರು ವ್ಯವಸ್ಥಿತವಾಗಿ ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಗಲ್ಫ್ನಿಂದ ಬಂದಿದ್ದ ಸಮೀರ್‌ನಲ್ಲಿ ಪತ್ನಿ ಬೆಂಗಳೂರಿಗೆ ಪ್ರವಾಸಕ್ಕೆ ತೆರಳುವ ಬಗ್ಗೆ ಪ್ರಸ್ತಾಪಿಸಿ, ತನ್ನ ಪುಟಾಣಿ ಮಗುವಿನ ಜತೆಗೆ ಸೆ.13ರಂದು ಬೆಂಗಳೂರಿಗೆ ಹೋಗಿ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. ಸುತ್ತಾಟಕ್ಕಾಗಿ ಕ್ಯಾಬ್‌ ಬುಕಿಂಗ್‌ ಮಾಡಲು ಮುಂದಾಗಿದ್ದಾರೆನ್ನಲಾಗಿದೆ.
ಪ್ರಿಯತಮನ ಕ್ಯಾಬ್‌ನಲ್ಲಿ ಸಂಚಾರ
ಫಿರ್ದೋಸ್ನ ಪ್ರಿಯತಮ ಬೆಂಗಳೂರಿನಲ್ಲಿ ಕ್ಯಾಬ್‌ ಡ್ರೈವರ್‌ ಆಗಿರುವುದರಿಂದ ಆತನ ಕಾರನ್ನೇ ಬಳಸಿರುವ ಸಾಧ್ಯತೆ ಇದೆ. ಸಮೀರ್‌ಗೆ ಅವರಿಬ್ಬರ ಪ್ರೇಮ ವ್ಯವಹಾರ ಗೊತ್ತಿರಲಿಲ್ಲ ಎನ್ನಲಾಗಿದೆ. ಸೆ.14ರಂದು ದಂಪತಿ ರೂಂ ಖಾಲಿ ಮಾಡಿರುವುದು ಲಾಡಿjನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸೆ.15ರಂದು ಕೊಡೈಕನಾಲ್‌ ಹೋಗುವ ರಸ್ತೆಯಲ್ಲಿ ಸಮೀರ್‌ ಶವ ಪತ್ತೆಯಾಗಿತ್ತು.
ಇಬ್ಬರೂ ಸೇರಿ ಸಮೀರ್‌ನ ಕತ್ತಿಗೆ ಇರಿದು ಕೊಂದು ಕೊಡೈಕನಾಲ್‌ ರಸ್ತೆ ಬದಿಯ ಕಂದಕಕ್ಕೆ ಬಿಸಾಡಲು ಮುಂದಾಗಿದ್ದು, ಯಾವುದೋ ಕಾರಣಕ್ಕೆ ವಿಫ‌ಲವಾಗಿ ರಸ್ತೆ ಬದಿಯಲ್ಲಿ ಎಸೆದು ಕಾರಿನಲ್ಲಿ ಪರಾರಿಯಾಗಿರಬೇಕು. ಶವ ಕಂದಕಕ್ಕೆ ಬಿದ್ದಿದ್ದರೆ ಸಮೀರ್‌ ಸಾವು ನಿಗೂಢವಾಗಿಯೇ ಉಳಿಯುವ ಸಾಧ್ಯತೆಯಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಫಿರ್ದೋಸ್ ಹಾಗೂ ಆಸಿಫ್ ಅಪಾರ ನಗ-ನಗದಿನ ಜತೆಯಲ್ಲಿ ನಾಪತ್ತೆಯಾಗಿರುವುದು ಅವರ ಮೇಲಿನ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪೊಲೀಸರ ವಿಶ್ವಾಸ
ಬಜಪೆ ಪೊಲೀಸರು ದೇವತಾನಪಟ್ಟಿ ಪೊಲೀಸರಿಗೆ ಸಹಕಾರ ನೀಡಿದ್ದು, ಮಹತ್ವದ ದಾಖಲೆಗಳನ್ನು ಒದಗಿಸಿದ್ದಾರೆ. ತಮಿಳುನಾಡು ಪೊಲೀಸರು ಪೋಸ್ಟ್‌ ಮಾರ್ಟಂ ವರದಿಗೆ ಕಾಯುತ್ತಿದ್ದು, ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿಯಲ್ಲಿ ಅಸ್ಪಷ್ಟ ದೃಶ್ಯ
ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಕೊಡೈಕನಾಲ್‌ ಪ್ರದೇಶದ ಕೆಲವು ಸಿಸಿಟಿವಿಯಲ್ಲಿ ಅಸ್ಪಷ್ಟ ದೃಶ್ಯಗಳು ದಾಖಲಾಗಿದೆ ಎಂದು ದೇವತಾನಪಟ್ಟಿ ಪೊಲೀಸರು ತಿಳಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا