Urdu   /   English   /   Nawayathi

ಅ.2ರಿಂದ ಉಪವಾಸ ಸತ್ಯಾಗ್ರಹ, ಕೇಂದ್ರ ಸರ್ಕಾರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ

share with us

ಅಹಮದ್‍ನಗರ್: 29 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಲೋಕಪಾಲರ ನೇಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದೆ ಎಂದು ಆರೋಪಿಸಿ ಖ್ಯಾತ ಗಾಂಧಿವಾದಿ ಹಾಗೂ ಭ್ರಷ್ಟಾಚಾರ ನಿಗ್ರಹ ಹೋರಾಟಗಾರ ಅಣ್ಣಾ ಹಜಾರೆ ಅವರು ಅಕ್ಟೋಬರ್ 2ರಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಹಮದಾಬಾದ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲರನ್ನು ನೇಮಕ ಮಾಡುವ ಬಿಜೆಪಿ ಸರ್ಕಾರದ ಭರವಸೆ ಈವರೆಗೂ ಈಡೇರಿಲ್ಲ ಎಂದು ಟೀಕಿಸಿದರು. ಈ ಸಂಬಂಧ ತಾವು ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಪತ್ರವನ್ನು ಬರೆದಿದ್ದು, ಈವರೆಗೆ ಬರೆದ ಹಲವು ಪತ್ರಗಳಿಗೆ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೂ, ಲೋಕಪಾಲರನ್ನು ನೇಮಕ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

# ಅಣ್ಣಾ ಲೋಕಪಾಲ ಮಸೂದೆ ಆಂದೋಲನ
2011ರಲ್ಲಿ ಅಣ್ಣಾ ಹಜಾರೆಯವರು ಭಾರತದ ಸಂಸತ್ತಿನಲ್ಲಿ ಪ್ರಬಲವಾದ ಭ್ರಷ್ಟಾಚಾರ-ವಿರೋಧಿ ಲೋಕಪಾಲ (ಲೋಕಾಯುಕ್ತ) ಮಸೂದೆ ಮಂಡನೆಗೆ ಆಂದೋಲನದ ನಾಯಕತ್ವ ವಹಿಸಿದರು. ಈ ಆಂದೋಲನದ ಭಾಗವಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಮತ್ತು ಕರ್ನಾಟಕದ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾಧಿಗಳಾದ ಪ್ರಶಾಂತ್ ಭೂಷಣ್, ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದ ಸದಸ್ಯರೊಂದಿಗೆ ಹೆಚ್ಚು ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಲೋಕಪಾಲ ರಿಗೆ ಹೆಚ್ಚಿನ ಅಧಿಕಾರ ನೀಡುವ ಜನ ಲೋಕಪಾಲ ಮಸೂದೆ (ಜನರ ಲೋಕಪಾಲ ಮಸೂದೆ) ಎಂಬ ಪರ್ಯಾಯ ಮಸೂದೆಯ ಕರಡನ್ನು ಸಿದ್ದಪಡಿಸಿದರು. ಸರ್ಕಾರ ಮತ್ತು ಸಾರ್ವಜನಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಬೇಡಿಕೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ರವರು ತಿರಸ್ಕರಿಸಿದ ನಂತರ 5 ಏಪ್ರಿಲ್ 2011ರಿಂದ ಬೇಡಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲು ಹಜಾರೆಯವರು ನಿರ್ಧರಿಸಿದರು. ಮಾಧ್ಯಮಗಳ ಮೂಲಕ ಆಂದೋಲನವು ಬಹುಬೇಗ ಗಮನ ಸೆಳೆಯಿತು. ಸಾವಿರಾರು ಜನರು ಹಜರೆಯವರ ಕಾರ್ಯಕ್ಕೆ ಬೆಂಬಲ ನೀಡಲು ಕೈಜೋಡಿಸಿದ್ದರು. 150ರಷ್ಟು ಜನರು ಹಜರೆಯವರ ಜೊತೆ ಉಪವಾಸದಲ್ಲಿ ಪಾಲ್ಗೊಂಡಿದ್ದರು,

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا