Urdu   /   English   /   Nawayathi

ಮಹಾ ವಂಚಕ ಚೋಕ್ಸಿ ಹಸ್ತಾಂತರಕ್ಕೆ ಅಂಟಿಗುವಾ ಸರ್ಕಾರ ಭರವಸೆ

share with us

ನ್ಯೂಯಾರ್ಕ್: 27 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ಸಾಲ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಂಟಿಗುವಾ ಮತ್ತು ಬರ್ಬುಡಾ ಸರ್ಕಾರ ಸಂಪೂರ್ಣ ಸಹಕಾರದ ಭರವಸೆ ನೀಡಿದೆ. ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್‍ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಅಂಟಿಗುವಾ ಮತ್ತು ಬರ್ಬುಡಾದ ಸಹವರ್ತಿ ಇ.ಪಿ.ಚೆಟ್ ಗ್ರೀನ್ ಅವರನ್ನು ಭೇಟಿ ಮಾಡಿದ ವೇಳೆ ಈ ಆಶ್ವಾಸನೆ ಲಭಿಸಿದೆ.

ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿ ಆಶ್ರಯ ಪಡೆದಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಹಾಗೂ ಸಾಧ್ಯವಾದಷ್ಟೂ ಶೀಘ್ರ ಈ ವಿಷಯವನ್ನು ಇತ್ಯರ್ಥಗೊಳಿಸಲು ಅಂಟಿಗುವಾ ತನ್ನ ಬದ್ದತೆ ಪ್ರದರ್ಶಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ಟ್ವಿಟ್‍ನಲ್ಲಿ ತಿಳಿಸಿದ್ದಾರೆ. ಭಾರತಕ್ಕೆ ಚೋಕ್ಸಿಯನ್ನು ಹಸ್ತಾಂತರ ಸಂಬಂಧ ಇದೊಂದು ಫಲಪ್ರದ ಚರ್ಚೆಯಾಗಿದ್ದು, ಈ ವಿಷಯದಲ್ಲಿ ಸಂಪೂರ್ಣ ಸಹಕಾರ ಮತ್ತು ಬೆಂಬಲದ ವಾಗ್ದಾನ ಅಂಟಿಗುವಾ ಮತ್ತು ಬರ್ಬುಡಾ ಸರ್ಕಾರದಿಂದ ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا