Urdu   /   English   /   Nawayathi

ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವುದರಲ್ಲಿ ಭಾರತ ಯಶಸ್ವಿ: ಟ್ರಂಪ್

share with us

ನ್ಯೂಯಾರ್ಕ್: 26 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಬಡತನದಿಂದ ಲಕ್ಷಾಂತರ ಜನರನ್ನು ಮೇಲೆತ್ತುವುದರಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವದ ಹಿರಿಯಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ 73 ನೇ  ಅಧಿವೇಶನದಲ್ಲಿ ಎರಡನೇ ಬಾರಿಗೆ  ಮಾತನಾಡಿದ ಅವರು, ಭಾರತದಲ್ಲಿ ಅಸಂಖ್ಯಾತ ಲಕ್ಷಾಂತರ ಜನರನ್ನು ಬಡತನದಿಂದ  ಮೇಲೆತ್ತಿ ಮಧ್ಯಮವರ್ಗಕ್ಕೆ  ತರಲಾಗಿದೆ ಎಂದು ಹೇಳಿದರು.

35 ನಿಮಿಷಗಳ ಕಾಲ ಸುಧೀರ್ಘ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್,  ಅನೇಕ ರಾಷ್ಟ್ರಗಳ ಜನರು ತಮ್ಮ ರಾಷ್ಟ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲು ಬಂದಿದ್ದಾರೆ.  ಅವರೆಲ್ಲರ ಭಾಷಣಗಳು, ನಿರ್ಣಯಗಳು ಮತ್ತು  ಪ್ರತಿಯೊಂದು ವಿಶ್ವ ಹಾಗೂ ಪ್ರತಿಯೊಬ್ಬರ ಭರವಸೆಗಳು ನಮ್ಮ ಚಿಂತನೆಗಳಾಗಿಯೇ ಬದಲಾಗಿ   ಅದೇ ಪ್ರಶ್ನೆ ಮೂಡುತ್ತದೆ ಎಂದರು.

ಮುಂದಿನ ಪೀಳಿಗೆಯ ಮಕ್ಕಳಿಗೆ ನಾವು ಯಾವ ರೀತಿಯ ಜಗತ್ತನ್ನು ಬೀಡುತ್ತೇವೆ ಮತ್ತು ಅವರು ಯಾವ ರೀತಿಯ ರಾಷ್ಟ್ರಗಳನ್ನು ಆನುವಂಶಿಕವಾಗಿ ಪಡೆಯುತ್ತೇವೆ ಎಂಬ ಪ್ರಶ್ನೆ ಇದೆ ಎಂದು ಟ್ರಂಪ್ ಹೇಳಿದರು.

ವಿವಿಧ  ದೇಶಗಳ ಪ್ರತಿನಿಧಿಗಳಿಂದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಸಭಾಂಗಣ ತುಂಬಿದ್ದು, ಇದಕ್ಕೆ ನಿಜವಾಗಿಯೂ ವಿಶೇಷವಾದ ಇತಿಹಾಸವಿದೆ .ಸೌದಿ ಅರೇಬಿಯಾದ  ಹೊಸ ಸುಧಾರಣೆಗಳು  ಮತ್ತು ಇಸ್ರೇಲ್ ಪವಿತ್ರ ದೇಶದಲ್ಲಿ  ಪ್ರಜಾಪ್ರಭುತ್ವದ  70 ನೇ ವಾರ್ಷಿಕೋತ್ಸವವನ್ನು "ಹೆಮ್ಮೆಯಿಂದ ಆಚರಿಸುತ್ತಿದ್ದಾರೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا