Urdu   /   English   /   Nawayathi

ಯುಎಇಗೆ ಕ್ಷಿಪಣಿ ದಾಳಿ?

share with us

ಟೆಹರಾನ್‌: 26 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಇರಾನ್‌ ಬೆದರಿಕೆ ಹಾಕಿದೆ ಎಂದು ಹೇಳಲಾಗಿದೆ. ಈ ಬಗೆಗಿನ ವೀಡಿಯೋವನ್ನು ಇರಾನ್‌ನ ರೆವೊಲ್ಯೂಷನರಿ ಗಾರ್ಡ್‌ ಪ್ರಕಟಿಸಿದೆ. ಅದರಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲ ಖಮೇನಿ  ಮಾತನಾಡಿದ್ದಾರೆ ಎಂದು ಹೇಳಲಾಗಿರುವ ಧ್ವನಿ ಇದೆ. ಕಳೆದ ಶನಿವಾರ ಅಹ್ವಾಜ್‌ ಎಂಬಲ್ಲಿ ನಡೆಸಲಾಗಿದ್ದ ದಾಳಿಯಲ್ಲಿ 25 ಮಂದಿ ಅಸುನೀಗಿ, 60 ಮಂದಿ ಗಾಯಗೊಂಡಿದ್ದರು. ಅದಕ್ಕೆ ಸೌದಿ ಅರೇಬಿಯಾ, ಯುಎಇ ಕಾರಣ. ಅವುಗಳ ವಿರುದ್ಧ ಕಠಿಣವಾಗಿ ವರ್ತಿಸಬೇಕು ಎಂದು ಖೊಮೇನಿ ಪ್ರತಿಪಾದಿಸಿರುವುದು ವೀಡಿಯೋದಲ್ಲಿದೆ. ಈ ಹೇಳಿಕೆಯಿಂದಾಗಿ ಪರ್ಷಿಯನ್‌ ಗಲ್ಫ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ಮತ್ತಷ್ಟು ಹೆಚ್ಚಾಗಲಿದೆ.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا