Urdu   /   English   /   Nawayathi

ಬಲವಾದ ಸಂಬಂಧಕ್ಕೆ ಸಾಕ್ಷಿ ; ಪಿಎಂ ಮೋದಿಗೆ ಟ್ರಂಪ್‌ ಸುಂದರ ಸಂದೇಶ

share with us

ವಿಶ್ವಸಂಸ್ಥೆ: 25 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭಾರತ ಮತ್ತು ಅಮೆರಿಕದ ನಡುವೆ ಸಂಬಂಧ ಇನ್ನಷ್ಟು ಬಲಗೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಣ್ಯಾತೀಗಣ್ಯ ವಿಶ್ವ ನಾಯಕರ ಎದುರು 'ನನ್ನ ಮಿತ್ರ' ಎಂದಿದ್ದಾರೆ. 

ಸೋಮವಾರ ವಿಶ್ವಸಂಸ್ಥೆಯಲ್ಲಿ  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಟ್ರಂಪ್‌ ಅವರು ಪರಸ್ಪರ ಶುಭಾಶಯಗಳನ್ನು ವಿನಮಯ ಮಾಡಿಕೊಂಡರು. ಈ ವೇಳೆ ಟ್ರಂಪ್‌ 'ನಾನು ಭಾರತವನ್ನು ಪ್ರೀತಿಸುತ್ತೇನೆ, ನನ್ನ ಮಿತ್ರ ಮೋದಿಗೆ ಶುಭಾಶಯಗಳನ್ನು ತಿಳಿಸಿ' ಎಂದಿದ್ದಾರೆ. 

ವಿಶ್ವದ ದಿಗ್ಗಜ ನಾಯಕರ ಎದುರು ಈ ಹೇಳಿಕೆ ನೀಡಿದ್ದಾರೆ. ಮೋದಿ ಅವರೂ ನಿಮಗೆ ಶುಭ ಕೋರಿದ್ದಾರೆ ಎಂದು ಸುಷ್ಮಾ ಸ್ವರಾಜ್‌ ಅವರು ಉತ್ತರಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا