Urdu   /   English   /   Nawayathi

ಪಾಕಿಸ್ತಾನದ 'ತಂತ್ರಗಾರಿಕೆಯ' ಕೃತ್ಯಗಳನ್ನು ನಿಭಾಯಿಸುವ ರೀತಿ ನಮಗೆ ತಿಳಿದಿದೆ: ವಿಶ್ವಸಂಸ್ಥೆಯಲ್ಲಿ ಭಾರತ

share with us

ಯುನೈಟೆಡ್ ನೇಷನ್ಸ್: 24 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಸೈನಿಕರ ಅಪರಹರಣ, ಕೊಲೆ, ಪೋಲೀಸರ ಹತ್ಯೆಗಳ ಬಳಿಕ ಭಾರತ-ಪಾಕ್ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿದ ಭಾರತ ಇಂದು (ಸೋಮವಾರ)  ಆರಂಭವಾಗಲಿರುವ 73ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಠಿಣ ನಿರ್ಧಾರದ ಕುರಿತು ಸ್ಪಷ್ಟನೆ ನೀಡುವ ನಿರೀಕ್ಷೆ ಇದೆ.

ANI✔@ANI

If somebody else would like to be a one trick pony, it is for them to regurgitate&act.We've handled this act many times in past & are confident we'll be able to do it again: Indian Ambassador to UN Syed Akbaruddin on if Pakistan will raise Kashmir issue at

08:58 - 24 Sep 2018

ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಮುಂದಿಟ್ಟು ಪಾಕ್ ಮತ್ತೆ ಕ್ಯಾತೆ ತೆಗೆಯಬಹುದೆಂದು ಭಾರತೀಯ ರಾಯಭಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. "ಬೇರೆ ಯಾರಾದರೂ (ಪಾಕಿಸ್ತಾನ) ಒಂದೇ ಬಗೆಯ ತಂತ್ರಗಾರಿಕೆ ಅನುಸರಿಸಿ ಕಾಶ್ಮೀರ ವಿಷಯದಲ್ಲಿ ಮುಂದುವರಿಯುತ್ತಿದ್ದರೆ ನಾವು ಅದಕ್ಕೆ ತಕ್ಕ ಉತ್ತರ ನೀಡಲು ಸಮರ್ಥರಿದ್ದೇವೆ. ಪಾಕಿಸ್ತಾನದ 'ಟ್ರಿಕ್ ಪೋನಿ' ತಂತ್ರಗಾರಿಕೆ ಕುರಿತು ನಮಗೆ ಗೊತ್ತಿದೆ.ಈ ಹಿಂದೆ ನಾವು ಅನೇಕ ಬಾರಿ ಈ ಕಾರ್ಯವನ್ನು ಮಾಡಿದ್ದೇವೆ, ಯುಎನ್ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನವು  ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಒಂದು ಜಾಗತಿಕ ವೇದಿಕೆಯೆಂದು ಅಕ್ಬರುದ್ದೀನ್ ಹೇಳಿದ್ದಾರೆ, ಆದರೆ ಪ್ರತಿ ದೇಶವೂ ಸಾರ್ವಭೌಮತ್ವದ್ದಾಗಿದೆ ಮತ್ತು ಅವರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕೆ ಬದ್ದವಾಗಿರಬೇಕು.

ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಉನ್ನತ ಮಟ್ಟದ ಯುಎನ್ ಜನರಲ್ ಅಸೆಂಬ್ಲಿ (ಯುಎನ್ಜಿಎ) ಅಧಿವೇಶನದಲ್ಲಿ ಈ ವಾರ ಪಾಲ್ಗೊಳ್ಳುತ್ತಿದ್ದು ಅವರು 30 ರಾಷ್ಟ್ರಗಳ ಮುಖಂಡರು ಮತ್ತು ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವವರ ಜತೆ ಮಾತುಕತೆ ನಡೆಸಲಿದ್ದಾರೆ. ಆದಾಗ್ಯೂ, ಸುಷ್ಮಾ ಸ್ವರಾಜ್ ಮತ್ತು ಖುರೇಷಿ ಇಬ್ಬರೂ ಸಹ ದಕ್ಷಿಣ ಏಷ್ಯಾದ ಅಸೋಸಿಯೇಷನ್ ​​ಫಾರ್ ರೀಜನಲ್ ಕೋಪರೇಷನ್ (ಸಾರ್ಕ್) ಸಭೆಗಳಲ್ಲಿ ಒಂದೇ ವೇದಿಕೆಯಲ್ಲಿರಲಿದ್ದಾರೆ.

Syed Akbaruddin✔@AkbaruddinIndia

India's activities at Day 1

07:32 - 24 Sep 2018

ಸಭೆಯಲ್ಲಿ ಐದನೇ ಭಾಷಣಕಾರರಾಗಿರುವ ಸುಷ್ಮಾ ಸ್ವರಾಜ್ ಭಾರತೀಯ ಕಾಲಮಾನ ಸಂಜೆ 7.15ಕ್ಕೆ ಭಾಷಣ ಮಾಡುವ ನಿರೀಕ್ಷೆ ಇದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا