Urdu   /   English   /   Nawayathi

ಟ್ರಂಪ್‌ಗೂ ಸದ್ದಾಂಗೆ ಬಂದ ಗತಿ: ಇರಾನ್‌

share with us

ದುಬೈ: 23 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಇರಾನ್‌-ಅಮೆರಿಕ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇರಾಕ್‌ ಸರ್ವಾಧಿಕಾರಿ ಸದ್ದಾಂ ಹುಸೇನ್‌ನನ್ನು ಉರುಳಿಸಿದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನೂ ಉರುಳಿಸುತ್ತೇವೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ. ಅಲ್ಲದೆ ಇರಾನ್‌ ಯಾವುದೇ ಕಾರಣಕ್ಕೂ ತನ್ನ ರಕ್ಷಣಾ ತಂತ್ರಗಳನ್ನು ಬಳಸದೇ ಸುಮ್ಮನೆ ಕೂರುವುದಿಲ್ಲ ಎಂದಿದ್ದಾರೆ.

ಮೇ ತಿಂಗಳಲ್ಲಿ ಉಭಯ ದೇಶಗಳ ಮಧ್ಯದ ಅಣ್ವಸ್ತ್ರ ಒಪ್ಪಂದವನ್ನು ಅಮೆರಿಕ ರದ್ದುಗೊಳಿಸಿ, ನಿಷೇಧ ಹೇರಿದ್ದರಿಂದ ಸಂಘರ್ಷ ಆರಂಭವಾಗಿತ್ತು. ನ.4ರಿಂದ ಮತ್ತೂಂದು ಸುತ್ತಿನ ನಿಷೇಧವೂ ಜಾರಿಗೆ ಬರಲಿದೆ. ತನ್ನ ಸಾಮರ್ಥ್ಯ ಪ್ರದರ್ಶನಕ್ಕಾಗಿ ಟೆಹ್ರಾನ್‌ನಲ್ಲಿ ಕೆಲ ದಿನಗಳ ಹಿಂದೆ ನೌಕಾ ಪಡೆಯ ಸಮರಾಭ್ಯಾಸ ನಡೆಸಿದೆ. ಅಲ್ಲದೆ 600ಕ್ಕೂ ಹೆಚ್ಚು ತೈಲ ನೌಕೆಗಳ ಪ್ರದರ್ಶನವನ್ನೂ ಇರಾನ್‌ ನಡೆಸಿದೆ. ಇಲ್ಲಿಂದ ಅಮೆರಿಕ್ಕೆ ಪೂರೈಕೆಯಾಗುವ ಕಚ್ಚಾ ತೈಲ ವನ್ನು ಇರಾನ್‌ ತಡೆವ ಸಾಧ್ಯತೆಯಿದೆ ಎನ್ನಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا