Urdu   /   English   /   Nawayathi

ಭಾರತೀಯರಿಗೆ ಟ್ರಂಪ್‌ ಸಂಕಷ್ಟ

share with us

ವಾಷಿಂಗ್ಟನ್‌: 23 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕದಲ್ಲಿ ಇರುವ ಭಾರತೀಯರಿಗೆ ಟ್ರಂಪ್‌ ಆಡಳಿತದಿಂದ ಹೊಸ ತಲೆನೋವು ಶುರುವಾಗಿದೆ. ಇನ್ನು 3 ತಿಂಗಳ ಒಳಗಾಗಿ ಎಚ್‌4 ವೀಸಾದಾರರ ಉದ್ಯೋಗದ ಪರವಾನಗಿಯನ್ನು ರದ್ದುಗೊಳಿ ಸು ವುದಾಗಿ ಶನಿವಾರ ಇಲ್ಲಿನ ಫೆಡರಲ್‌ ಕೋರ್ಟ್‌ಗೆ ಟ್ರಂಪ್‌ ಆಡಳಿತ ಮಾಹಿತಿ ನೀಡಿದೆ. ಇದರಿಂದಾಗಿ, ಎಚ್‌4 ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಮಾಡು ತ್ತಿದ್ದ ಸಾವಿರಾರು ಭಾರತೀಯ ಮಹಿಳೆಯರು ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ.

ಹಿಂದಿನ ಒಬಾಮ ಆಡಳಿತವು ಎಚ್‌1ಬಿ ವೀಸಾದಾರರ ಕುಟುಂಬ ಸದಸ್ಯರಿಗೂ ಅಮೆರಿಕದಲ್ಲಿ ಉದ್ಯೋಗ ಕೈಗೊಳ್ಳಲು ಅನುಮತಿ ನೀಡಿ ಎಚ್‌4 ವೀಸಾ ನೀಡುವ ನಿಯಮವನ್ನು ಜಾರಿ ಮಾಡಿತ್ತು. ಈ ನೀತಿಯಿಂದ ನಮ್ಮ ಉದ್ಯೋಗ ನಷ್ಟವಾಗು ತ್ತಿದೆ ಎಂದು ಆರೋಪಿಸಿ "ಸೇವ್‌ ಜಾಬ್ಸ್ ಯುಎಸ್‌ಎ' ಎಂಬ ಸಂಸ್ಥೆಯು ಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲಿನ ವಿಚಾರಣೆ ವೇಳೆ, ಟ್ರಂಪ್‌ ಆಡಳಿತವು 3 ತಿಂಗಳೊಳಗೆ ಹಿಂದಿನ ಅಧ್ಯಕ್ಷ ಒಬಾಮ ಆಡಳಿತದ ನೀತಿಯನ್ನು ರದ್ದು ಮಾಡುವುದಾಗಿ ನುಡಿದಿದೆ. 

ಏನಿದು ಎಚ್‌4 ವೀಸಾ?: ಎಚ್‌-1ಬಿ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ದಲ್ಲಿರುವ ವ್ಯಕ್ತಿಗಳ ಕುಟುಂಬ ಸದಸ್ಯರು(ಪತ್ನಿ ಮತ್ತು 21 ವರ್ಷದೊಳಗಿನ ಮಕ್ಕಳು) ಹೊಂದುವ ವೀಸಾವನ್ನು ಎಚ್‌4 ವೀಸಾ ಎನ್ನುತ್ತಾರೆ. ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆ(ಯುಎಸ್‌ಸಿಐಎಸ್‌) ಈ ವೀಸಾವನ್ನು ವಿತರಿಸುತ್ತದೆ. ಎಚ್‌4 ವೀಸಾ ಹೊಂದಿದವರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅರ್ಹರಾಗಿರುತ್ತಾರೆ. ಹಿಂದಿನ ಒಬಾಮ ಆಡಳಿತವು ಈ ಸೌಲಭ್ಯ ಕಲ್ಪಿಸಿದ್ದು, ಭಾರತೀಯ-ಅಮೆರಿಕನ್‌ ಮಹಿಳೆಯರೇ ಇದರ ಪ್ರಮುಖ ಫ‌ಲಾನುಭವಿಗಳಾಗಿದ್ದಾರೆ. 2017, ಡಿ.15ರವರೆಗಿನ ಮಾಹಿತಿ ಪ್ರಕಾರ, ಎಚ್‌-4 ವೀಸಾದಾರರಿಗೆ ಉದ್ಯೋಗ ದೃಢೀಕರಣ ಕೋರಿ ಸಲ್ಲಿಕೆಯಾಗಿದ್ದ 1,26,853 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ.ಅಂದರೆ ಲಕ್ಷಾಂತರ ಮಂದಿ ಉದ್ಯೋಗ ಕಳೆದು ಕೊಳ್ಳುವ ಭೀತಿಯಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا