Urdu   /   English   /   Nawayathi

220 ಬಸ್ ಗಳಿಗೆ ಬಯೋ ಡೀಸೆಲ್‌ ಬಳಸಲು ಕೆಎಸ್ ಆರ್ ಟಿಸಿ ಸಿದ್ಧತೆ

share with us

ಬೆಂಗಳೂರು: 22 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಡೀಸೆಲ್ ಗೆ ಪರ್ಯಾಯವಾಗಿ ಜೈವಿಕ ಇಂಧನ ಬಳಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಸಿದ್ಧತೆ ನಡೆಸಿದೆ. ಕೆಎಸ್ಆರ್ ಟಿಸಿ 8750 ಬಸ್ ಗಳು ನಿತ್ಯ 6 ರಿಂದ 7 ಲಕ್ಷ ಲೀಟರ್ ಡೀಸೆಲ್ ಕುಡಿಯುತ್ತಿದ್ದು, ಈ ಪೈಕಿ ಕನಿಷ್ಠ 220 ಬಸ್ ಗಳಿಗೆ ಸಂಪೂರ್ಣ ಅಥವಾ ಭಾಗಶಃ ಬಯೋ ಡೀಸೆಲ್ ಬಳಸಲು ನಿರ್ಧರಿಸಲಾಗಿದೆ ಎಂದು ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್ ಆರ್ ಉಮಾಶಂಕರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕೆಎಸ್ ಆರ್ ಟಿಸಿ ಬಯೋ ಡೀಸೆಲ್ ಪೂರೈಕೆ ಮಾಡಲು ಇತ್ತೀಚಿಗೆ ಕೆಲವು ಕಂಪನಿಗಳು ಆಸಕ್ತಿ ತೋರಿದ್ದು, ಅದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಒಂದು ವೇಳೆ ಅವರು ಸಮಂಜಸವಾದ ದರಕ್ಕೆ ಉತ್ತಮ ಗುಣಮಟ್ಟದ ಬಯೋ ಡೀಸೆಲ್ ಪೂರೈಕೆ ಮಾಡಲು ಒಪ್ಪಿದರೆ ಆದಷ್ಟು ಬೇಗ ಬಯೋ ಡೀಸೆಲ್ ಬಸ್ ಗಳ ಸಂಚಾರ ಆರಂಭವಾಗಲಿದೆ ಎಂದಿದ್ದಾರೆ.

ಕೆಎಸ್ ಆರ್ ಟಿಸಿ ಈಗಾಗಲೇ 220 ಬಸ್ ಗಳಲ್ಲಿ ಬಯೋ ಡೀಸೆಲ್ ಕಿಟ್ ಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 20 ಬಸ್ ಗಳಿಗೆ ಸಂಪೂರ್ಣ ಬಯೋ ಡೀಸೆಲ್ ಹಾಗೂ 200 ಬಸ್ ಗಳಿಗೆ ಭಾಗಶಃ ಬಯೋ ಡೀಸೆಲ್ ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಡೀಸೆಲ್‌ನೊಂದಿಗೆ ಶೇ. 20ರಷ್ಟು ಬಯೋ ಡೀಸೆಲ್‌ ಮಿಶ್ರಣ ಮಾಡಿ ಪ್ರತಿ ಲೀಟರ್‌ಗೆ 5 ರು. ಉಳಿಸಿ ಬಸ್ಗಳನ್ನ ಓಡಿಸಲು ಪ್ಲಾನ್ ಹಾಕಿದ್ದು, ಈ ಸಂಬಂಧ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೆಎಸ್‌ಆರ್‌ಟಿಸಿ 2015ರ ಅಕ್ಟೋಬರ್‌ 2ರಂದು 10 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಬಯೋ ಡೀಸೆಲ್‌ ಬಳಸಲಾಗಿತ್ತು. ಬಯೋ ಡೀಸೆಲ್‌ನ ತಾಂತ್ರಿಕ ಕಾರ್ಯಕ್ಷಮತೆ, ಮೈಲೇಜ್‌, ಎಂಜಿನ್‌ ಕಾರ್ಯಕ್ಷಮತೆ ಮತ್ತು ಮಾಲಿನ್ಯ ಪ್ರಮಾಣದ ಬಗ್ಗೆ ತಜ್ಞರ ತಂಡದಿಂದ ಮೌಲ್ಯಮಾಪನ ಮಾಡಿಸಲಾಗಿತ್ತು. ಇವರು ನೀಡಿದ ವರದಿಯ ಆಧಾರದ ಮೇಲೆ ಈಗ ಹೆಚ್ಚಿನ ಬಸ್‌ಗಳಲ್ಲಿ ಬಯೋ ಡಿಸೇಲ್ ಬಳಕೆಗೆ ಮುಂದಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا