Urdu   /   English   /   Nawayathi

ರಫೇಲ್ ಒಪ್ಪಂದಕ್ಕೆ ರಿಲಯನ್ಸ್ ಸಂಸ್ಥೆ ಆಯ್ಕೆ ನಮ್ಮದಲ್ಲ : ಫ್ರಾನ್ಸ್ ಸ್ಪಷ್ಟನೆ

share with us

ನವದೆಹಲಿ: 22 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕಾಗಿ ಸಹಭಾಗಿ ಸಂಸ್ಥೆಯನ್ನಾಗಿ ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡುವ ವಿಷಯದಲ್ಲಿ ತಾನು ಹಸ್ತಕ್ಷೇಪ ಮಾಡಿಲ್ಲ. ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಫ್ರಾನ್ಸ್ ಸರ್ಕಾರ ಹೇಳಿದೆ. ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಫ್ರಾನ್ಸ್‍ನ ಫೈಟರ್ ಜೆಟ್ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ ಫ್ರೆಂಚ್ ಸರ್ಕಾರ ಇದನ್ನು ಸ್ಪಷ್ಟಪಡಿಸಿದೆ.

ರಿಲಯನ್ಸ್ ಸಂಸ್ಥೆಯನ್ನು ಸಹಭಾಗಿತ್ವ ಸಂಸ್ಥೆಯನ್ನಾಗಿ ಆಯ್ಕೆ ಮಾಡುವ ವಿಷಯದಲ್ಲಿ ತಾನು ಮೂಗು ತೂರಿಸಿಲ್ಲ. ಆ ಆಯ್ಕೆಯ ಸ್ವಾತಂತ್ರವನ್ನು ಡಸ್ಸಾಲ್ಟ್‍ಗೆ ನೀಡಲಾಗಿತ್ತು ಎಂದು ಫ್ರಾನ್ಸ್ ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.  ಬಹು ಕೋಟಿ ರೂ.ಗಳ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ವಿವಾದಕ್ಕೆ ತೆರೆ ಎಳೆಯಲು ಫೈಟರ್ ಜೆಟ್ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಫ್ರಾನ್ಸ್ ಸರ್ಕಾರ ಸಹ ಹೇಳಿಕೆ ನೀಡಿದೆ.

ರಫೇಲ್ ಯುದ್ಧ ವಿಮಾ£ಗಳ ಖರೀದಿ ಒಪ್ಪಂದಕ್ಕಾಗಿ ಸಹಭಾಗಿ ಸಂಸ್ಥೆಯನ್ನಾಗಿ ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಹೇಳಿಕೆ ನೀಡಿರುವ ಡಸ್ಸಾಲ್ಟ್ ವಿವಾದಕ್ಕೆ ತೆಪೆ ಹಾಕುವ ಯತ್ನ ಮಾಡುತ್ತಿದೆ.  ಭಾರತದೊಂದಿಗೆ ಒಪ್ಪಂದದ ಅನ್ವಯ ಯುದ್ಧ ವಿಮಾನಗಳ ನಿರ್ಮಾಣಕ್ಕಾಗಿ ನಮಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದ ಅಗತ್ಯವಿತ್ತು. ಅಲ್ಲದೇ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಯೋಜನೆಯ ರೂಪಿಸಲು ಇದೊಂದು ಉತ್ತಮ ಆಯ್ಕೆಯಾಗಿತ್ತು. ಈ ಕಾರಣಗಳಿಂದ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಅದು ಹೇಳಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا