Urdu   /   English   /   Nawayathi

ದೋಣಿ ದುರಂತಕ್ಕೆ 126 ಬಲಿ

share with us

ನೈರೋಬಿ: 22 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ತಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕ ದೋಣಿಯೊಂದು ಮುಳುಗಿದ ಪರಿಣಾಮ 126 ಮಂದಿ ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ಮುಳುಗಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 40 ಮಂದಿಯನ್ನು ರಕ್ಷಿಸಲಾಗಿದೆ. ದೋಣಿಯಲ್ಲಿ 200 ಮಂದಿ ಪ್ರಯಾಣಿಸುತ್ತಿದ್ದರು. ಈ ಸಂಖ್ಯೆ ದೋಣಿಯ ಸಾಮರ್ಥ್ಯಕ್ಕಿಂತ ದುಪ್ಪಟ್ಟು. ಬಂದರು ಹತ್ತಿರವಾಗುತ್ತಲೇ ಹಲವರು ಕೆಳಗಿಳಿಯುವ ಸ್ಥಳಕ್ಕೆ ಧಾವಿಸಿದರು. ಪರಿಣಾಮ, ಒಂದೇ ಕಡೆ ಭಾರ ಹೆಚ್ಚಾಗಿ ದೋಣಿ ಮುಳುಗಿತು ಎಂದು ಇಲ್ಲಿಯ ಮಾಧ್ಯಮಗಳು ವರದಿ ಮಾಡಿವೆ.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا