Urdu   /   English   /   Nawayathi

ಅಹಂಕಾರದ ಮತ್ತು ನಕಾರಾತ್ಮಕ ಪ್ರತಿಕ್ರಿಯೆ: ಭಾರತ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟೀಕೆ

share with us
ಇಸ್ಲಾಮಾಬಾದ್: 22 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ಉಪಟಳ ಹಾಗೂ ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆಗೈದ ಘಟನೆಯಿಂದ ಭಾರತ ಸರ್ಕಾರ ಪಾಕ್ ನೊಂದಿಗೆ ನಡೆಯಬೇಕಿದ್ದ ಮಾತುಕತೆಯನ್ನು ರದ್ದುಪಡಿಸಿದ್ದು ಇದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನ್ಯೂಯಾರ್ಕ್ ನಲ್ಲಿ ಇದೇ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯನ್ನು ಭಾರತ ರದ್ದುಗೊಳಿಸಿದೆ. ಭಾರತದ ಈ ನಡೆಯಿಂದ ಅಸಮಾಧಾನಗೊಂಡಿರುವ ಇಮ್ರಾನ್ ಖಾನ್ ಭಾರತದ ಈ ನಿರ್ಧಾರದಿಂದ ಶಾಂತಿ ಪ್ರಕ್ರಿಯೆ ಆರಂಭಿಸುವ ಯತ್ನಗಳಿಗೆ ಹಿನ್ನಡೆಯಾಗಿದೆ. ಇದು ಭಾರತದ ಅಹಂಕಾರದ ಮತ್ತು ನಕಾರಾತ್ಮಕ ಪ್ರತಿಕ್ರಿಯೆ ಎಂದು ಹೇಳಿದ್ದಾರೆ.

Imran Khan✔@ImranKhanPTI

Disappointed at the arrogant & negative response by India to my call for resumption of the peace dialogue. However, all my life I have come across small men occupying big offices who do not have the vision to see the larger picture.

3:01 PM - Sep 22, 2018

ಈ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ಶಾಂತಿಯುತ ಮಾತುಕತೆಗೆ ಭಾರತ ಸ್ಪಂದನೆ ಸರಿಯಿಲ್ಲ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು ಪೊಲೀಸರನ್ನು ಅಪಹರಿಸಿ ಹತ್ಯೆ ಮಾಡುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا