Urdu   /   English   /   Nawayathi

ಹಿಂದಿ ಮಾತನಾಡುವಂತೆ ಪ್ರಯಾಣಿಕನಿಗೆ 'ನಮ್ಮ ಮೆಟ್ರೋ' ಭದ್ರತಾ ಸಿಬ್ಬಂದಿ ಆಗ್ರಹ!

share with us

ಬೆಂಗಳೂರು: 18 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪ್ರಯಾಣಿಕರೊಬ್ಬರೊಂದಿಗೆ ಮೆಟ್ರೋ ಭದ್ರತಾ ಸಿಬ್ಬಂದಿಯೊಬ್ಬ ಅನುಚಿತವಾಗಿ ವರ್ತಿಸಿದ್ದು, ಹಿಂದಿ ಮಾತನಾಡುವಂತೆ ಆಗ್ರಹಿಸಿರುವ ಘಟನೆ ನಡೆದಿದೆ. ಐಟಿ ಇಲಾಖೆಯಲ್ಲಿ ಹಿರಿಯ ವ್ಯವಸ್ಥಾಪರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ (ಹೆಸರು ಬದಲಿಸಲಾಗಿದೆ) ಎಂಬುವವರ ಜೊತೆಗೆ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿಯೊಬ್ಬ ಅನುಚಿತವಾಗಿ ನಡೆದುಕೊಂಡಿದ್ದಾನೆ. 

ಸೆ.15 ರಂದು ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಪ್ರಕಾಶ್ ಅವರು ಮೆಟ್ರೋ ನಿಲ್ದಾಣದ ಬಳಿ ಬಂದಿದ್ದಾರೆ. ಈ ವೇಳೆ ಎಲಿವೇಟರ್ ಕುರಿತಂತೆ ಭದ್ರತಾ ಸಿಬ್ಬಂದಿಯೊಬ್ಬರನ್ನು ವಿಚಾರಿಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಸಿಬ್ಬಂದಿ ಹಿಂದಿ ಮಾತನಾಡುವಂತೆ ಆಗ್ರಹಿಸಿದ್ದಾನೆ. 

ಭದ್ರತಾ ಸಿಬ್ಬಂದಿ ಕೈಯಲ್ಲಿದ್ದ ಲಾಠಿಯನ್ನು ತನ್ನ ಎಡಗೈಗೆ ಜೋರಾಗಿ ಹೊಡೆದುಕೊಂಡು ಹಿಂದಿ ಗೊತ್ತಿದೆಯಾ ಎಂದು ಕೇಳಿದ. ಬಳಿಕ ಹಿಂದಿ ಕಲಿಯುವಂತೆ ತಿಳಿಸಿದ. ಸಿಬ್ಬಂದಿಗೆ ಕನ್ನಡ ಗೊತ್ತಿಲ್ಲದಿದ್ದರೆ ಪರವಾಗಿಲ್ಲ, ಆದರೆ, ನಡವಳಿಕೆ ಉತ್ತವಾಗಿರಬೇಕು. ನನಗೆ ಹಿಂದಿ ಭಾಷೆ ಗೊತ್ತಿದೆ. ಆದರೆ, ಆತ ಆತನಿಗೆ ಸರಿ ಹೊಂದುವ ರೀತಿಯಲ್ಲಿ ಮಾತನಾಡುವಂತೆ ತಿಳಿಸಿದ್ದ ಎಂದು ಪ್ರಕಾಶ್ ಅವರು ಹೇಳಿದ್ದಾರೆ. 

ಸಿಬ್ಬಂದಿಯ ವರ್ತನೆ ಕುರಿತಂತೆ ಪ್ರಕಾಶ್ ಅವರು ಬಿಎಂಆರ್'ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ. ವಸಂತ್ ರಾವ್ ಅವರಿದೆ ಟ್ವೀಟ್ ಮಾಡಿದ್ದಾರೆ. 

ಬಿಎಂಆರ್'ಸಿಎಲ್ ಸಿಬ್ಬಂದಿಗಳು ಸಭ್ಯರಾಗಿ ಮತ್ತು ವಿನಯಶೀಲರಾಗಬಹುದೇ? ಕೇವಲ ಕನ್ನಡ ಮಾತನಾಡಿದ ಕಾರಣಕ್ಕೆ ಸಿಬ್ಬಂದಿಗಳು ನಿಂದಿಸುವುದು ಹಾಗೂ ಬೆದರಿಕೆ ಹಾಕುವುದು ಸರಿಯಲ್ಲ... ಎಂದು ಹೇಳಿದ್ದಾರೆ. 

ಇದಲ್ಲದೆ ಮತ್ತೊಂದು ಟ್ವೀಟ್ ಮಾಡಿರುವ ಪ್ರಕಾಶ್ ಅವರು, ಸಿಬ್ಬಂದಿ ವರ್ತನೆ ಕುರಿತು ಟಿಕೆಟ್ ಸಿಬ್ಬಂದಿ ಹಾಗೂ ಕಸ್ಟಮರ್ ಕೇರ್ ವ್ಯಕ್ತಿಗೆ ಮೌಖಿಕ ದೂರು ನೀಡಿದ್ದೇನೆ. ಭದ್ರತಾ ಸಿಬ್ಬಂದಿಗಳು ಕನ್ನಡ ಮಾತನಾಡದೇ ಇರುವುದು, ಮೆಟ್ರೋದಲ್ಲಿ ಕನ್ನಡ ಮಾತನಾಡಲು ಬಿಡದೇ ಇರುವುದು ಕರ್ನಾಟಕದಲ್ಲಿ ಸರಿಯಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. 

ಪ್ರಕಾಶ್ ಅವರ ಈ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಘಲು, ಈ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಈ ಕುರಿತು ವಿಚಾರಣೆ ನಡೆಸಿ, ಪ್ರತಿಕ್ರಿಯೆ ನೀಡಲಾಗುತ್ತದೆ ಎಂದಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا