Urdu   /   English   /   Nawayathi

ಬೋಸ್ಟನ್‍ : 70 ಕಡೆ ಗ್ಯಾಸ್ ಪೈಪ್ ಸ್ಫೋಟ, ಸಾವಿರಾರು ಜನರ ರಕ್ಷಣೆ

share with us

ಬೋಸ್ಟನ್: 16 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕದ ಉತ್ತರ ಬೋಸ್ಟನ್‍ನ ಮೂರು ನಗರಗಳಲ್ಲಿ ಬರೋಬ್ಬರಿ 70 ಅನಿಲ ಪೈಪ್‍ಗಳ ಸ್ಫೋಟ ಸಂಭವಿಸಿದ್ದು, ಕನಿಷ್ಠ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದ ಲಾರೆನ್ಸ್ , ಆಂಡೋರ್ವ ಮತ್ತು ನಾರ್ಥ್ ಆಂಡೋರ್ವ ನಗರಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ಹೇಳಿದ್ದಾರೆ.

ಅನಿಲ ಸ್ಫೋಟಗೊಂಡ ಪ್ರದೇಶದಲ್ಲಿ ಭಾರೀ ಪ್ರಮಾಣದ ಅನಿಲ್ ಸೋರಿಕೆಯಾಗುತ್ತಿದ್ದು, ಸುಮಾರು 20 ರಿಂದ ಕಿಮೀ ವ್ಯಾಪ್ತಿವರೆಗೂ ಅನಿಲ ಸೋರಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ಸದ್ಯ ಎಲ್ಲ ಗ್ಯಾಸ್‍ಲೈನ್‍ಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಸರಿಪಡಿಸಲು ಕೆಲ ದಿನಗಳು ಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಸ್ಫೋಟಕ್ಕೆ ಕಾರಣ ಏನೆಂದು ಈಗ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ತಹಬಂದಿಗೆ ಬಂದ ನಂತರ ಜಂಟಿ ತನಿಖೆ ನಡೆಸಲಾಗುವುದು ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ಹೇಳಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا