Urdu   /   English   /   Nawayathi

ಫ್ಲಾರೆನ್ಸ್‌ ಅಬ್ಬರಕ್ಕೆ ನಾರ್ತ್‌ ಕೆರೊಲಿನಾ ತತ್ತರ

share with us

ವಿಲ್ಲಿಂಗ್ಟನ್: 16 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕದ ನಾರ್ತ್‌ ಕೆರೊಲಿನಾಗೆ ಶುಕ್ರವಾರ ಅಪ್ಪಳಿಸಿರುವ ಫ್ಲಾರೆನ್ಸ್‌ ಚಂಡಮಾರುತವು ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಐವರನ್ನು ಬಲಿಪಡೆದುಕೊಂಡಿದೆ. ಕೆರೊಲಿನಾದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಮುಂದುವರಿದಿರುವ ಕಾರಣ, ಚಂಡಮಾರುತಕ್ಕೆ ಬಲಿಯಾದವರ ನಿಖರ ಸಂಖ್ಯೆ ಗೊತ್ತಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಕೆಲವು ದಿನಗಳ ಕಾಲ ಚಂಡಮಾರುತದ ಪ್ರಭಾವ ಇರಲಿದ್ದು, ಇಷ್ಟೊಂದು ಮಳೆಯಾಗುತ್ತಿರುವುದು ಸಾವಿರ ವರ್ಷಗಳಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ನ್ಯೂ ಬರ್ನ್ ಪ್ರದೇಶದಲ್ಲಿ ನೂರಾರು ಮಂದಿ ಮನೆಗಳಲ್ಲೇ ಸಿಲುಕಿಕೊಂಡಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ ರಕ್ಷಣೆಗಾಗಿ ಎದುರುನೋಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಚಂಡಮಾರುತ ಪೀಡಿತ ಪ್ರದೇಶಕ್ಕೆ ಅಧ್ಯಕ್ಷ ಟ್ರಂಪ್‌ ಭೇಟಿ ನೀಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا