Urdu   /   English   /   Nawayathi

2019ರ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಎಐಎಂಐಎಂ, ಬಿಬಿಎಂ ಮೈತ್ರಿ

share with us

ಮುಂಬಯಿ: 15 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) 2019ರ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಮತ್ತು ಭಾರಿಪ ಬಹುಜನ ಮಹಾಸಂಘ (ಬಿಬಿಎಂ) ಪಕ್ಷಗಳು ಮೈತ್ರಿ ಮಾಡಿಕೊಂಡು ಸೆಣಸಲಿವೆ ಎಂದು ಇಂದು ಶನಿವಾರ ಪಕ್ಷದ ನಾಯಕರು ಪ್ರಕಟಿಸಿದ್ದಾರೆ. ಉಭಯ ಪಕ್ಷಗಳ ನಡುವೆ ಇಂದು ನಡೆದಿರುವ ಪ್ರಾಥಮಿಕ ಮಾತುಕತೆಗಳು ಧನಾತ್ಮಕ ಪರಿಣಾಮ ನೀಡಿವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಮಾಧ್ಯಮಕ್ಕೆ ತಿಳಿಸಿದರು. 

ಬಿಬಿಎಂ ಮುಖ್ಯಸ್ಥ ಪ್ರಕಾಶ್‌ ಅಂಬೇಡ್ಕರ್‌ ಜೀ ಅವರು ಅ.2ರಂದು ಔರಂಗಾಬಾದ್‌ ನಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮ ನಡೆಸಲಿದ್ದು ಅದರಲ್ಲಿ ನಾನೂ ಪಾಲ್ಗೊಳ್ಳುವೆ ಎಂದ ಓವೈಸಿ, ಉಭಯ ಪಕ್ಷಗಳ ನಡುವಿನ ಔಪಚಾರಿಕ ಮೈತ್ರಿ ಸ್ವರೂಪವನ್ನು ಅನಂತರ ಪ್ರಕಟಿಸಲಾಗುವುದು ಎಂದು ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا