Urdu   /   English   /   Nawayathi

ಮಲ್ಯ ಪರಾರಿಯಾಗಲು ಪ್ರಧಾನಿ 'ನೆಚ್ಚಿನ' ಸಿಬಿಐ ಅಧಿಕಾರಿಯಿಂದಲೇ ಅವಕಾಶ: ರಾಹುಲ್ ಗಾಂಧಿ

share with us

ನವದೆಹಲಿ: 15 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರಮೋದಿ ಅವರ ನೆಚ್ಚಿನ ಸಿಬಿಐ ಅಧಿಕಾರಿ  ದೇಶಭ್ರಷ್ಟ ಮದ್ಯ ಉದ್ಯಮಿ ವಿಜಯ್ ಮಲ್ಯ ವಿರುದ್ಧದ  'ಲುಕ್ ಔಟ್ ನೋಟಿಸ್ ' ದುರ್ಬಲಗೊಳಿಸುವ  ಮೂಲಕ  ವಿದೇಶಕ್ಕೆ ಪರಾರಿಯಾಗಲು  ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ. ಗುಜರಾತ್ ಕೆಡರ್ ಸಿಬಿಐ  ಅಧಿಕಾರಿ ಎ. ಕೆ. ಶರ್ಮಾ  ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಸಂದೇಶ ಹಾಕಿದ್ದಾರೆ.

ವಜ್ರ ಉದ್ಯಮಿಗಳಾದ  ನಿರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಹ ವಿದೇಶಕ್ಕೆ ಪರಾರಿಯಾಗುವಲ್ಲಿ ಇದೇ ಅಧಿಕಾರಿ  ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು  ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 

Rahul Gandhi✔@RahulGandhi

CBI Jt. Director, A K Sharma, weakened Mallya’s “Look Out” notice, allowing Mallya to escape.

Mr Sharma, a Gujarat cadre officer, is the PM’s blue-eyed-boy in the CBI.

The same officer was in charge of Nirav Modi & Mehul Choksi’s escape plans. Ooops...
investigation!

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ  ವಂಚಿಸಿದ ನಂತರ ವಿಜಯ್ ಮಲ್ಯ ವಿದೇಶಕ್ಕೆ ಹಾರಲು ಅರುಣ್ ಜೇಟ್ಲಿ ಹಾಗೂ ನರೇಂದ್ರಮೋದಿ ನೆರವು ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದು, ಈ ಸಂಬಂಧ ಅರುಣ್ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಮಲ್ಯ ಪರಾರಿ ಪ್ರಕರಣ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್  ತಿಂಗಳಲ್ಲಿ  ಲಂಡನ್ ನಲ್ಲಿ  62 ವರ್ಷದ ವಿಜಯ್ ಮಲ್ಯ  ಬಂಧನಕ್ಕೊಳಗಾಗಿದ್ದ ನಂತರ  ಹಸ್ತಾಂತರ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು, ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂಪಾಯಿ ವಂಚನೆ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ದೇಶ ತೊರೆಯುವ ಮುನ್ನ 2016ರ ಮಾರ್ಚ್ ತಿಂಗಳಲ್ಲಿ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದಾಗಿ ಮಲ್ಯ ಇತ್ತೀಚಿಗೆ ಲಂಡನ್ ನಲ್ಲಿ ಹೇಳಿಕೆ ನೀಡಿದ ನಂತರ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಅರುಣ್ ಜೇಟ್ಲಿ ವಿರುದ್ಧ ಮುಗಿ ಬಿದಿದ್ದಾರೆ. ಆದಾಗ್ಯೂ, ವಿಜಯ್ ಮಲ್ಯ ತಮ್ಮನ್ನು ಭೇಟಿಯಾಗಿಯೇ ಇಲ್ಲ ಎಂದು ಅರುಣ್ ಜೇಟ್ಲಿ ಹೇಳುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا