Urdu   /   English   /   Nawayathi

‘ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಚಾಲನೆ, ಪ್ರಧಾನಿಗೆ ಬಿಗ್-ಬಿ , ರತನ್ ಟಾಟಾ ಸಾಥ್

share with us

ನವದೆಹಲಿ: 15 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸ್ವಚ್ಛತೆ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಶ್ರಮದಾನದ ಮೂಲಕ ನಾವೆಲ್ಲರೂ ಸ್ವಚ್ಛತೆಯೇ ಸೇವೆ ಎಂಬ ಅಭಿಯಾನವನ್ನು ಸಾರ್ಥಕಗೊಳಿಸೋಣ ಎಂದೂ ಸಲಹೆ ನೀಡಿದ್ದಾರೆ.  ರಾಜಧಾನಿ ದೆಹಲಿಯಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಇಂದು ಚಾಲನೆ ನೀಡಿ, ಸ್ವಚ್ಛತೆ ರಾಯಭಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರಪತಿ ಮಹಾತ್ಮಗಾಂಧಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದರು.  ದೇಶದ ಸ್ಚಚ್ಚತೆ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ ಮೋದಿ, ಸ್ವಚ್ಛತೆಯಿಂದ ದೇಶದ ಆರೋಗ್ಯ ಸ್ಥಿತಿಯೂ ಸುಧಾರಿಸುತ್ತದೆ ಎಂದು ಅವರು ಹೇಳಿದರು.

ಸ್ವಚ್ಛ ಭಾರತ್ ಅಭಿಯಾನದಿಂದ ದೇಶದ 3 ಲಕ್ಷಕ್ಕೂ ಹೆಚ್ಚು ಮಕ್ಕಳ ಆರೋಗ್ಯ ಸಂರಕ್ಷಣೆಯಾಗಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಕ್ರಮದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಮಕ್ಕಳ ಆರೋಗ್ಯ ರಕ್ಷಣೆಗೆ ನೆರವಾಗಿದೆ ಎಂದು ಪ್ರಧಾನಿ ಹೇಳಿದರು.  ಸ್ವಚ್ಛ ಭಾರತ್ ಅಭಿಯಾನ ಪೊರಿಗೊಳಿಸಿ ಆಕ್ಟೋಬರ್ 2ಕ್ಕೆ ನಾಲ್ಕು ವರ್ಷಗಳಾಗಲಿವೆ. ಈ ಮಹತ್ವದ ಅಭಿಯಾನದ ಮೂಲಕ ನಾವು ನಾಲ್ಕು ವರ್ಷಗಳಲ್ಲಿ ನಾಲ್ಕೂವರೆ ಲಕ್ಷ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ದೇಶದ ಶೇ.90ರಷ್ಟು ಪ್ರದೇಶಗಳು ಬಯಲು ಶೌಚದಿಂದ ಮುಕ್ತವಾಗಿವೆ. ಇಂದಿನಿಂದ ಚಾಲನೆಯಾಗಿರುವ ಸ್ವಚ್ಛತೆಯೇ ಸೇವೆ ಅ.2ರ ವರೆಗೂ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಗಾಂಧೀಜಿ ಅವರ ಸ್ವಚ್ಛ ಭಾರತ ಕನಸನ್ನು ನಾನು ಸಾಕಾರಗೊಳಿಸುತ್ತಿದ್ದು, ದೃಢಸಂಕಲ್ಪದೊಂದಿಗೆ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಮುನ್ನಡೆಯುತ್ತಿದ್ದೇವೆ ಎಂದು ಮೋದಿ ಒತ್ತಿ ಹೇಳಿದರು. ಶೌಚಾಲಯ ನಿರ್ಮಾಣದಿಂದ ರೋಗರುಜಿನಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಸ್ವಚ್ಛತೆ ಪ್ರತಿಯೊಬ್ಬರ ದೈನಂದಿನ ಬದುಕಿನ ರೂಢಿಗತ ಅವಿಭಾಜ್ಯ ಅಂಗವಾಗಬೇಕು. ಸ್ವಚ್ಛತೆಯೇ ಸೇವೆ ಎಂಬ ಶ್ರಮದಾನವನ್ನು ನಾವೆಲ್ಲರೂ ಶುರು ಮಾಡೋಣ ಎಂದು ಮೋದಿ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಸ್ವಚ್ಛತಾ ರಾಯಭಾರಿಗಳೊಂದಿಗೆ ಸಂವಾದ ನಡೆಸಿದ ಅವರು, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

Modi--02

# ಬಚ್ಚನ್-ರತನ್ ಟಾಟಾ ಜೊತೆ ಸಂವಾದ:
ಈ ಮಧ್ಯೆ ಪ್ರಧಾನಿ ಮೋದಿ ಅವರು ಖ್ಯಾತ ಚಿತ್ರ ನಟ ಅಮಿತಾಭ್ ಬಚ್ಚನ್ ಮತ್ತು ಹೆಸರಾಂತ ಉದ್ಯಮಿ ರತನ್ ಟಾಟಾ ಅವರೊಂದಿಗೆ ವಿಡಿಯೋ ಕಾನ್ಫೆರೆನ್ ಸಂವಾದ ನಡೆಸಿದರು. ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಈ ಗಣ್ಯರು ಅಪಾರ ಪ್ರಶಂಸೆ ವ್ಯಕ್ತಪಡಿಸಿ ಇದಕ್ಕಾಗಿ ತಾವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.  ಸಂವಾದದಲ್ಲಿ ಮಾತನಾಡಿದ ಬಿಗ್-ಬಿ ಬಚ್ಚನ್, ಮುಂಬೈನ ಸಮುದ್ರ ಕೊಳೆತು ನಾರುತ್ತಿದ್ದ ಪರಿಸ್ಥಿತಿಯನ್ನು ತಿಳಿಸಿ, ತಾವು ಸ್ಥಳೀಯರ ನೆರವಿನೊಂದಿಗೆ ಸಮುದ್ರ ತೀರದಲ್ಲಿ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದ್ದನ್ನು ವಿವರಿಸಿದರು.  ಸ್ವಚ್ಚತಾ ಎಕ್ಸ್‍ಪ್ರೆಸ್ ಮತ್ತು ಸ್ವಚ್ಛತಾ ಪಾಠಗಳ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿರುವ ಸಂಗತಿಯನ್ನು ಬಚ್ಚನ್ ತಿಳಿಸಿದರು. ಅಲ್ಲದೇ ಕ್ಸೀನಥಾನ್ ಮೂಲಕ ಆಸ್ಪತ್ರೆಗಳಲ್ಲಿ ಕಸ ವಿಲೇವಾರಿಗಾಗಿ ಕೈಗೊಂಡ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು.

Modi--03

ಸ್ವಚ್ಛತಾ ಅಭಿಯಾನ ಯೋಜನೆ ಅನ್ವಯ ನೀವು(ಪ್ರಧಾನಿ) ಸಲಹೆ ಮಾಡುವ ಕಾರ್ಯಕ್ರಮಗಳಿಗೆ ಸಾಥ್ ನೀಡಲು ನಾವು ಸಂಪೂರ್ಣ ಬದ್ಧ ಎಂದು ಬಚ್ಚನ್ ವಾಗ್ದಾನ ಮಾಡಿದರು.  ಮೋದಿ ಜೊತೆ ಸಂವಾದ ನಡೆಸಿದ ಟಾಟಾ ಸಮೂಹ ಸಂಸ್ಥೆಗಳ ಮಾಲೀಕ ರತನ್ ಟಾಟಾ, ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.   ಟಾಟಾ ಟ್ರಸ್ಟ್ ಮೂಲಕ ನಾವು ಹಲವಾರು ಸ್ವಚ್ಛತಾ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸಂಗತಿಯಲ್ಲಿ ರತನ್ ಟಾಟಾ ವಿವರಿಸಿದರು.   ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಇಂದಿನಿಂದ ದೇಶಾದ್ಯಂತ ಪೊರಿಗೆ ಬಂದಿದ್ದು, ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا