Urdu   /   English   /   Nawayathi

ಅಫ್ಘಾನ್ ಗೆ ಆರ್ಥಿಕ ಕಾರಿಡಾರ್‌ ವಿಸ್ತರಣೆ

share with us

ಇಸ್ಲಾಮಾಬಾದ್‌: 12 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ಥಾನದ ಅರ್ಥ ವ್ಯವಸ್ಥೆಯ ಮೇಲೆ ಪಾಕಿಸ್ಥಾನ-ಚೀನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದರೂ, ಯೋಜನೆಯನ್ನು ಅಫ್ಘಾನಿಸ್ಥಾನಕ್ಕೆ ವಿಸ್ತರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಚೀನ ವಿದೇಶಾಂಗ ಸಚಿವ ವಾಂಗ್‌ ಇ ಪಾಕ್‌ ಭೇಟಿ ವೇಳೆ ಈ ಕುರಿತು ನಿರ್ಧರಿಸಲಾಗಿದೆ. ಪಾಕಿಸ್ಥಾನದಲ್ಲಿ ಇಮ್ರಾನ್‌ ಖಾನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚೀನದ ಉನ್ನತಮಟ್ಟದ ನಿಯೋಗ ಭೇಟಿ ನೀಡಿ ವಿವಿಧ ವಿಚಾರಗಳ ಕುರಿತು ಚರ್ಚಿಸಿದೆ. ಎರಡೂ ದೇಶಗಳ ನಡುವೆ ಎಲ್ಲಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವೃದ್ಧಿಸಿಕೊಳ್ಳಲೂ ನಿರ್ಧರಿಸಲಾಗಿದೆ ಎಂದು ಚೀನ ಹೇಳಿದೆ. 

ಸಿಪಿಇಸಿ ಯೋಜನೆ ಪೂರ್ಣಗೊಳಿಸುವುದಕ್ಕೆ ಸರಕಾರ ಬದ್ಧವಾಗಿದೆ. ಚೀನ ಜತೆಗಿನ ಬಾಂಧವ್ಯ ದೇಶದ ವಿದೇಶಾಂಗ ನೀತಿಯ ಪ್ರಧಾನ ಅಂಶ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا