Urdu   /   English   /   Nawayathi

ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಪಡೆಗೆ ಭಾರತೀಯ ಮೂಲದ ಮೊದಲ ಸಿಖ್ ಅನ್ಶ್ ದೀಪ್ ಸಿಂಗ್ ಭಾಟಿಯಾ ಸೇರ್ಪಡೆ

share with us

ವಾಷಿಂಗ್ಟನ್: 12 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭಾರತೀಯ ಮೂಲದ ಅನ್ಶ್ ದೀಪ್ ಸಿಂಗ್ ಭಾಟಿಯಾ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಇಂತಹಾ ಮಹತ್ವದ ಹುದ್ದೆಗೆ ನೇಮಕವಾದ ಮೊದಲ ಸಿಖ್ಖ್ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಪಂಜಾಬಿನ ಲೂಧಿಯಾನಾ ನಿವಾಸಿಯಾದ ಅನ್ಶ್ ದೀಪ್ ಸಿಂಗ್ ಸಾಕಷ್ಟು ಸಮಯದ ಕಠಿಣ ತರಬೇತಿಯ ಬಳಿಕ ಕಳೆದ ವಾರ ಅಮೆರಿಕಾ ಅಧ್ಯಕ್ಷರ ಭದ್ರತಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ ಮೂಲದವರಾದ ಸಿಂಗ್ 1984 ರಲ್ಲಿ ಸಿಖ್ ವಿರೋಧಿ ದಂಗೆಯ ನಂತರ,ಪಂಜಾಬಿನ ಲೂಧಿಯಾನದಲ್ಲಿ ನೆಲೆಸಿದ್ದರು. ದಂಗೆಯಲ್ಲಿ ಅನ್ಶ್ ದೀಪ್ ಸಿಂಗ್ ತಮ್ಮ ಚಿಕ್ಕಪ್ಪನನ್ನು ಕಳೆದುಕೊಂಡಿದ್ದರೆ ತಂದೆಯ ಮೇಲೆ ಮೂರು ಬಾರಿ ಗುಂಡಿನ ದಾಳಿ ನಡೆದಿತ್ತು.

ಇನ್ನು ಅನ್ಶ್ ದೀಪ್ ಅವರಿಗಿ ಇನ್ನೂ ಹತ್ತು ವರ್ಷವಾಗಿದ್ದ ವೇಳೆ 2000 ರಲ್ಲಿ, ಅವರ ಕುಟುಂಬವು ಬಾರತದಿಂದ ದೂರದ ಅಮೆರಿಕಾಗೆ ತೆರಳಿತ್ತು.

View image on TwitterView image on Twitter

Hardeep Singh Puri✔@HardeepSPuri

Ludhiana-born Anshdeep Singh Bhatia refused to change his 'looks' & went to court against this rider.

Sikh sangat is proud as he now becomes the first turbaned Sikh to be inducted into US President's security detail.

ਗੁਰਮੁਖਿ ਰੋਮਿ ਰੋਮਿ ਹਰਿ ਧਿਆਵੈ ॥
ਨਾਨਕ ਗੁਰਮੁਖਿ ਸਾਚਿ ਸਮਾਵੈ ॥੨੭॥

1:21 PM - Sep 12, 2018

ಭದ್ರತಾ ಕೆಲಸಕ್ಕೆ ನಿಯೋಜನೆಗೊಳ್ಳುವ ಮುನ್ನ ತಮ್ಮ ಗುರುತನ್ನು ಬದಲಿಸಿಕೊಳ್ಳಬೇಕೆಂದು ಮೊದಲಿಗೆ ಅವರಲ್ಲಿ ಕೇಳಲಾಗಿತ್ತು, ಆದರೆ ಸಿಖ್ಖ್ ಧರ್ಮೀಯರಾದ ಅವರು ಇದಕ್ಕೆ ಸಮ್ಮತಿಸಿರಲಿಲ್ಲ ಹಾಗೂ ಅದಕ್ಕಾಗಿ ಅವರು ಕಾನೂನು ಸಮರವನ್ನೂ ನಡೆಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ ಅಂಶ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا