Urdu   /   English   /   Nawayathi

ಡ್ರೋನ್ ಕ್ಯಾಮರಾ ಸಹಾಯದಿಂದ 8 ಲಕ್ಷ ಮೌಲ್ಯದ ಗಾಂಜಾ ಪತ್ತೆ !

share with us

ವಿಜಯಪುರ: 09 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ವಿಜಯಪುರದ ಹೆಬ್ಬಲಟ್ಟಿ ಗ್ರಾಮದಲ್ಲಿ ಬೆಳೆದಿದ್ದ ಸುಮಾರು 8 ಲಕ್ಷ ಮೌಲ್ಯದ  ಗಾಂಜಾವನ್ನು   ಅಬಕಾರಿ ಅಧಿಕಾರಿಗಳು ಡ್ರೋನ್ ಕ್ಯಾಮರಾಗಳ ಸಹಾಯದಿಂದ  ಪತ್ತೆ ಹಚ್ಚಿದ್ದಾರೆ. ನಿಂಬೆಹಣ್ಣು, ಬಾಳೆಗಿಡ ಮಧ್ಯ ಬೆಳೆಯಲಾಗಿದ್ದ 101 ಕೆಜಿ ಗಾಂಜಾವನ್ನು ಪತ್ತೆ ಹಚ್ಚಲಾಗಿದೆ.  ಗಾಂಜಾ ಬೆಳೆದಿದ್ದ ಆರೋಪಿ ಎಸ್. ಕೆ. ಗುರಪ್ಪ ಎಂಬವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈ ವರ್ಷದ ಆರಂಭದಲ್ಲಿ  ಕೆಲವರ  ಜಮೀನಿನಲ್ಲೂ  ಬೆಳೆಯಲಾಗಿದ್ದ ಗಾಂಜಾವನ್ನು ಇದೇ ರೀತಿಯಲ್ಲಿ ಪತ್ತೆ ಹಚ್ಚಲಾಗಿತ್ತು. ದಾಳಿ ಸಂದರ್ಭದಲ್ಲಿ ಸಮಯ ಉಳಿತಾಯದ ಜೊತೆಗೆ ಸೂಕ್ತ ಸಾಕ್ಷ್ಯಗಳಿಗೆ ಈ ತಂತ್ರಜ್ಞಾನ ನೆರವಾಗುವುದರಿಂದ ಅಬಕಾರಿ ಇಲಾಖೆ ಉಪ ಆಯುಕ್ತ ಎ. ರವಿಶಂಕರ್   ಜಿಲ್ಲೆಗೆ ಡ್ರೋನ್ ಕ್ಯಾಮರಾಗಳು ಬೇಕೆಂದು ಉನ್ನತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರವಿಶಂಕರ್,  ಈ ಭಾಗದ ರೈತರು ನಿಂಬೆ,  ಬಾಳೆಗಿಡ, ಹತ್ತಿ ಬೆಳೆಯ ಮಧ್ಯೆ ಗಾಂಜಾ ಬೆಳೆಯುತ್ತಿದ್ದರಿಂದ ಅದನ್ನು ಪತ್ತೆ ಹಚ್ಚಲು ಕಷ್ಟಕರವಾಗಿತ್ತು. ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾ ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾಗಳು ಸಹಾಯವಾಗಿವೆ ಎಂದು  ಹೇಳಿದರು.

ಬಗರ್ ಹುಕುಂ ಜಮೀನಿನಲ್ಲಿ ಗಾಂಜಾ ಬೆಳೆ ಕಂಡುಬಂದಲ್ಲಿ ರೈತರ ವಿರುದ್ಧ ಗೂಂಡಾ ಕಾಯ್ದೆಯಡಿ  ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಉನ್ನತ   ಅಧಿಕಾರಿಗಳು ಡ್ರೋನ್ ಕ್ಯಾಮರಾಗಳನ್ನು ನೀಡಿದ್ದರೆ ಅದರ ಬಗ್ಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು ಎಂದು ರವಿಕುಮಾರ್ ತಿಳಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا