Urdu   /   English   /   Nawayathi

ಬಿಹಾರದಲ್ಲಿ ಕುಖ್ಯಾತ ನಕ್ಸಲಿಯನೊಬ್ಬನ ಸೆರೆ, 3 ಎ.ಕೆ.-47 ರೈಫಲ್‍ಗಳು ವಶಕ್ಕೆ

share with us

ಪಾಟ್ನಾ: 09 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಬಿಹಾರ ಪೊಲೀಸರು ಕುಪ್ರಸಿದ್ಧ ನಕ್ಸಲಿಯನೊಬ್ಬನನ್ನು ಬಂಧಿಸಿ ಮೂರು ಎ.ಕೆ.-47 ರೈಫಲ್‍ಗಳು ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಯಂ ಘೋಷಿತ ನಕ್ಸಲ್ ವಲಯ ಕಮಾಂಡರ್ ಲಾಲ್‍ಬಾಬು ಸಹ್ನಿ ಅಲಿಯಾಸ್ ಭಾಸ್ಕರ್ ಅಲಿಯಾಸ್ ಪ್ರಳಯ್ ಬಂಧಿತ ಮಾವೋವಾದಿ. ಮಂಗರ್ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದರು.  ಬಿಹಾರ್ ಶಿಯೋಹರ್ ಮತ್ತು ಮುಜಾಫರ್‍ಪುರ್ ಜಿಲ್ಲೆಗಳ ಗಡಿಯಲ್ಲಿ ಬಂಧಿಸಲಾಗಿದೆ ಈತ 24 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಕುಖ್ಯಾತ ನಕ್ಸಲ್ ಲಾಲ್‍ಬಾಬು ಬಂಧನದ ಬಗ್ಗೆ ಮಾಹಿತಿ ನೀಡಿದ ಮಂಗರ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್, ಈತನ ವಿಚಾರಣೆಯಿಂದ ಹಲವು ಮಾಹಿತಿಗಳು ಲಭಿಸಿವೆ. ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿರುವವರ ಹೆಸರುಗಳು ಬಹಿರಂಗವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವ್ಯವಸ್ಥಿತ ತಂಡವೊಂದು ಸಕ್ರಿಯವಾಗಿದ್ದು, ಆ ಗ್ಯಾಂಗ್ ಮೂಲಕ ಹಲವು ಜನರಿಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪೂರೈಕೆಯಾಗಿವೆ ಎಂದು ವಿವರಿಸಿದರು.

ನಿಷೇಧಿತ ಸಿಪಿಐ(ಮಾವೋವಾದಿ) ನಕ್ಸಲ್ ಸಂಘಟನೆಗೆ ಸೇರಿದ ಈತನನ್ನು ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಮತ್ತು ಜಿಲ್ಲಾ ಪೊಲೀಸ್ ಜಂಟಿ ತಂಡ ಬಂಧಿಸಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮಧುಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊರಿಯಾ ಗ್ರಾಮದ ನಿವಾಸಿಯಾದ ಈತನ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಹಲವಾರು ವರ್ಷಗಳಿಂದ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದ ಪ್ರಳಯ್ ಬಂಧನ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا