Urdu   /   English   /   Nawayathi

ಉತ್ತರಖಂಡ್ : ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ಬಿಜೆಪಿ ಶಾಸಕನ ದರ್ಪ : ವಿಡಿಯೋ ವೈರಲ್

share with us

ಉತ್ತರ ಖಂಡ್: 09 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಉತ್ತರ ಖಂಡ್ ರಾಜ್ಯದಲ್ಲಿ  ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ದರ್ಪ ಮೆರೆದಿದ್ದಾರೆ. ಮಹಿಳೆ ಎಂಬುದನ್ನು ಲೆಕ್ಕಿಸದೆ ಸಾರ್ವಜನಿಕರ ಎದುರಲ್ಲಿಯೇ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಇಬ್ಬರು ಬೆಂಬಲಿಗರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರುದ್ರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜ್ ಕುಮಾರ್ ತುಕ್ರಾಲ್   ಉತ್ತರ್ ಖಂಡ್ ನಗರದ  ಸಂಚಾರಿ ಘಟಕದ ಸಬ್ ಇನ್ಸ್ ಪೆಕ್ಟರ್  ಅನಿತಾ ಗೈರೊಲ್ ಮೇಲೆ  ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು  ಠಾಣೆಯ ಮುಂಭಾಗವೇ   ಮಹಿಳಾ ಇನ್ಸ್ ಪೆಕ್ಟರ್  ವಿರುದ್ಧ ಹರಿಹಾಯ್ದಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಉತ್ತರಕ್ಕೆ ಅವಕಾಶ ನೀಡದೆ  ರೌಡಿ ರೀತಿಯಲ್ಲಿ ವರ್ತಿಸಿರುವುದು  ವಿಡಿಯೋದಲ್ಲಿ ಸೆರೆಯಾಗಿದೆ.

ANI@ANI

Uttarakhand: Video of BJP MLA from Rudrapur Rajkumar Thukral goes viral. In the video the MLA is seen threatening Sub Inspector of City Patrol Unit Anita Gairola over detention of two people over traffic violations. (7.9.18)

12:51 PM - Sep 9, 2018

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕರ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

https://youtu.be/9CPQloqvziQ

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا