Urdu   /   English   /   Nawayathi

ಕಳೆದ ವರ್ಷದಿಂದಾದ 75 ಅಪಘಾತಗಳಲ್ಲಿ 40 ಸಾವು: ಐದು ವರ್ಷಗಳಲ್ಲಿ ಉತ್ತಮ ಸುರಕ್ಷತಾ ಕ್ರಮ- ರೈಲ್ವೆ ಮಾಹಿತಿ

share with us

ನವದೆಹಲಿ: 09 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸೆಪ್ಟೆಂಬರ್ 2017 ರಿಂದ ಆಗಸ್ಟ್ 2018 ರ ನಡುವೆ ಸಂಭವಿಸಿದ  75 ರೈಲು ಅಪಘಾತಗಳಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಐದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದ್ದರೆ ಉತ್ತಮ ಸುರಕ್ಷತೆ ಒದಗಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ಸೆಪ್ಟೆಂಬರ್ 2016 ಮತ್ತು ಆಗಸ್ಟ್ 2017ರ ಮಧ್ಯೆ 80 ರೈಲು ಅಪಘಾತಗಳಾಗಿದ್ದು, 249 ಮಂದಿ ಸಾವಿಗೀಡಾಗಿದ್ದಾರೆ.  2016ರಲ್ಲಿ ಇಂದೋರ್- ಪಾಟ್ನಾ ಎಕ್ಸ್ ಪ್ರೆಸ್  ರೈಲು ಕನ್ಪೂರ್ ಬಳಿ ಹಳಿ ತಪ್ಪಿ 150 ಪ್ರಯಾಣಿಕರು ಸಾವನ್ನಪ್ಪಿದ್ದರು. ಆದರೆ, 2017 ಮತ್ತು 2018ರ ನಡುವಿನ ಅವಧಿಯಲ್ಲಿ  ಸಂಭವಿಸಿದ ಅಪಘಾತಗಳಲ್ಲಿ 40 ಜನ ಸಾವನ್ನಪ್ಪಿದ್ದಾರೆ ಎಂದು  ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ 2017ರಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ  20 ಮಂದಿ ಸಾವನ್ನಪ್ಪಿದ್ದರೆ, ಈ ವರ್ಷದ ಏಪ್ರಿಲ್ ನಲ್ಲಿ ಉತ್ತರಪ್ರದೇಶದಲ್ಲಿ  ರೈಲು ಶಾಲಾ ವಾಹನಕ್ಕೆ ಡಿಕ್ಕಿ 13 ಮಕ್ಕಳು ಸಾವನ್ನಪ್ಪಿದ್ದರು. ಸೆಪ್ಟೆಂಬರ್ 2013 ಮತ್ತು ಆಗಸ್ಟ್ 2014ರ ಅವಧಿಯಲ್ಲಿ 139 ಅಪಘಾತಗಳಲ್ಲಿ 275 ಮಂದಿ ಸಾವನ್ನಪ್ಪಿದ್ದರೆ, 2014-2015ರ ಅವಧಿಯಲ್ಲಿ 108 ಅಪಘಾತಗಳಲ್ಲಿ 196 ಜನ ಸಾವಿಗೀಡಾಗಿದ್ದಾರೆ.

ಸೆಪ್ಟೆಂಬರ್ 1,  2013ರಿಂದ ಆಗಸ್ಟ್ 31 , 2014 ರಲ್ಲಿ ಸಂಭವಿಸಿದ ರೈಲು ಅಪಘಾತಗಳನ್ನು   ಸೆಪ್ಟೆಂಬರ್ 1, 2017 ರಿಂದ ಆಗಸ್ಟ್ 31,  2018ಕ್ಕೆ ಹೋಲಿಸಿದ್ದರೆ  ರೈಲ್ವೆ ಸಂಬಂಧಿತ ಅಪಘಾತಗಳಲ್ಲಿ ಉಂಟಾದ ಮರಣ ಪ್ರಮಾಣ ಶೇ. 93 ರಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ  ಉತ್ತಮ ಹಳಿ ವ್ಯವಸ್ಥೆ ಮತ್ತಿತರ ನಿರ್ವಹಣಾ ವ್ಯವಸ್ಥೆಯಿಂದಾಗಿ ಅಪಘಾತ ಪ್ರಕರಣಗಳು ಕ್ಷೀಣಿಸಿದ್ದು, ಮಾರ್ಚ್ 2020ರೊಳಗೆ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಸಂಪೂರ್ಣವಾಗಿ ತೆಗೆದುಹಾಕುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا