Urdu   /   English   /   Nawayathi

ಮಂಕಿಯ ರೈಲ್ವೇ ಹಳಿಯಲ್ಲಿ ಆತ್ಮ ಹತ್ಯೆ ಮಾಡಿಕೊಂಡ ಯುವತಿ

share with us

ಭಟ್ಕಳ: 08 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿಯ ರೈಲ್ವೆ ಹಳಿ ಮೇಲೆ ಶುಕ್ರವಾರದಂದು ಯುವತಿಯೊಬ್ಬಳು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟ ಯುವತಿ ಹೊನ್ನಾವರ ತಾಲೂಕಿನ ವಡಗೇರಿಯ ನಿವಾಸಿ ಮಾಲಿನಿ ಗೌಡ(23) ಎಂದು ಗುರುತಿಸಲಾಗಿದೆ. ಫಿಕ್ರೋಖಬರ್ ಸುದ್ದಿಯ ಪ್ರಕಾರ ಮಾಲಿನ ಎರ್ನಾಕುಲಮ್ ಎಕ್ಸ್‍ಪ್ರೆಸ್ ರೈಲು ಬರುವ ವೇಳೆ ಹಳಿಯ ಮೇಲೆ ನಿಂತು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ಅಪಘಾತದಲ್ಲಿ ಯುವತಿಯ ಶವ ಛಿದ್ರವಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಲಾಗಿದೆ. ಮಾಲಿನಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಹದಿನೈದು ದಿನಗಳ ಹಿಂದೆ ತನ್ನ ಊರಿಗೆ ಬಂದಿದ್ದಳು ಎಂದು ತಿಳಿದು ಬಂದಿದೆ. ಪ್ರಕರಣ ಮಂಕಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا