Urdu   /   English   /   Nawayathi

ಸೌದಿ: ಸಾಮಾಜಿಕ ಮಾಧ್ಯಮದಲ್ಲಿ ಟೀಕೆ- 5 ವರ್ಷ ಜೈಲು ಖಚಿತ

share with us

ರಿಯಾದ್: 08 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳು, ಸಾರ್ವಜನಿಕ ನೈತಿಕತೆಯನ್ನು ಪ್ರಶ್ನಿಸುವ, ವ್ಯಂಗ್ಯ ಮಾಡುವ ಮತ್ತು ಅವುಗಳನ್ನು ಅಪಹಾಸ್ಯ ಮಾಡುವ ಸಂದೇಶಗಳನ್ನು, ಬರಹಗಳನ್ನು ಸಾಮಾಜಿಕ ಮಾಧ್ಯಮ- ಆನ್ ಲೈನ್ ಮೂಲಕ ಹರಡಿದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ಆನ್ ಲೈನ್ ಮೂಲಕ ವ್ಯಂಗ್ಯ ಹರಡುವುದನ್ನು ಸೈಬರ್ ಅಪರಾಧ ಎಂದು ಪರಿಗಣಿಸಲಾಗುವುದು ಮತ್ತು ಗರಿಷ್ಠ ಐದು ವರ್ಷ ಜೈಲು ಮತ್ತು ಮುವತ್ತು ಲಕ್ಷ ರಿಯಲ್ ದಂಡ($800,000)ವಿಧಿಸಲಾಗುತ್ತದೆ ಎಂದು ಸೌದಿ ಅರೇಬಿಯಾದ ಪಬ್ಲಿಕ್ ಪ್ರಾಸಿಕ್ಯೂಟರ್ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸೌದಿ ಅರೇಬಿಯಾದ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ರಾಜಕೀಯ ಭಿನ್ನಮತ ಮತ್ತು ಮಾನವ ಹಕ್ಕು ಹೋರಾಟವನ್ನು ದಮನಿಸುತ್ತಿದ್ದಾರೆ ಎಂಬ ಟೀಕೆಗಳಿಗೆ ಈ ಹೊಸ ಕ್ರಮ ಪುಷ್ಠಿ ನೀಡಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೌದಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರಹಗಳನ್ನು ಪ್ರಕಟಿಸುವ ತಮ್ಮ ಪರಿಚಿತರ ಬಗ್ಗೆ, ಸಾಮಾಜಿಕ ಕಾರ್ಯಕರ್ತರ ಬಗ್ಗೆ , ‘ಭಯೋತ್ಪಾದಕ ಚಟುವಟಿಕೆ’ಗಳ ನೆಲೆಯಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದು, ಸಾವಿರಾರು ಮಂದಿ ಇದರಿಂದ ಬಂಧನಕ್ಕೊಳಗಾಗಿದ್ದರು. ಟ್ವಿಟರ್ ಬಳಕೆದಾರರನ್ನು ಈ ವಿಷಯದಲ್ಲಿ ಗುರಿಯಾಗಿರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಯತ್ನಿಸಲಾಗಿದೆ ಎಂದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا