Urdu   /   English   /   Nawayathi

ಕ್ಷಮೆ ಕೇಳುವಂತೆ ಚೀನಾ ಜುಟ್ಟು ಹಿಡಿದು ನಿಂತಿದೆ ಕೇವಲ 12 ಸಾವಿರ ಜನಸಂಖ್ಯೆಯುಳ್ಳ ಈ ದ್ವೀಪ ರಾಷ್ಟ್ರ!

share with us

ಚೀನಾ: 06 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) "ಚೀನಾ ದೊಡ್ಡ ರಾಷ್ಟ್ರ ಅಂತೇನು ನಾವು ಕೇರ್ ಮಾಡೋದಿಲ್ಲ. ಅದು ನಮ್ಮ ಪಾಲುದಾರ ರಾಷ್ಟ್ರವಷ್ಟೇ, ಹೀಗೆಯೇ ಮಾಡಬೇಕು ಅಂತ ಡಿಕ್ಟೇಟ್ ಮಾಡಿ, ನಮಗೆ ಅಗೌರವ ತೋರಿಸುವಂತಿಲ್ಲ. ವಿಶ್ವಸಂಸ್ಥೆಯಲ್ಲಿ ಚೀನಾಗೆ ತಕ್ಕ ಪಾಠ ಕಲಿಸುತ್ತೇವೆ..." ದಕ್ಷಿಣ ಏಷ್ಯಾದ ಅತಿ ಪವರ್ಫುಲ್ ಎಂದು ಬೀಗುತ್ತಿದ್ದ ರಾಷ್ಟ್ರಕ್ಕೆ 12 ಸಾವಿರ ಜನಸಂಖ್ಯೆಯುಳ್ಳ ನೌರು ದ್ವೀಪ ರಾಷ್ಟ್ರದ ಅಧ್ಯಕ್ಷರು ನೀರಿಳಿಸಿದ ಪರಿ ಇದು. ಹೋದಲ್ಲೆಲ್ಲಾ ಹಸ್ತಕ್ಷೇಪ ಮಾಡಿ, ತನ್ನದೇ ನಡೆಯಬೇಕೆಂಬ ದುರಹಂಕಾರದ ವರ್ತನೆ ತೋರುವ ಚಾಳಿ ಹೊಂದಿರುವ ಚೀನಾ, ಮೊನ್ನೆ ನಡೆದ ಪೆಸಿಫಿಕ್ ಐಲ್ಯಾಂಡ್ಸ್ ಫೋರಂ ನಲ್ಲೂ ತನ್ನ ಎಂದಿನ ವರ್ತನೆಯನ್ನು ಜಗಜ್ಜಾಹೀರು ಮಾಡಿತ್ತು. 

ಕೇವಲ 12,000 ನಿವಾಸಿಗಳನ್ನು ಹೊಂದಿರುವ ನೌರು ದ್ವೀಪ ರಾಷ್ಟ್ರ 18 ಪೆಸಿಫಿಕ್ ರಾಷ್ಟ್ರಗಳ ನಾಯಕರು ಹಾಗೂ ಅಮೆರಿಕ, ಚೀನಾ ಸೇರಿದಂತೆ ಸದಸ್ಯರಾಗಿರದೇ ಇರುವ ಕೆಲವು ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳನ್ನು ಪೆಸಿಫಿಕ್ ಐಲ್ಯಾಂಡ್ ಫೋರಂ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.

ಚೀನಾ ಕಬಳಿಸಲು ಯತ್ನಿಸುತ್ತಿರುವ ತೈವಾನ್ ನೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ 6 ಪೆಸಿಫಿಕ್ ರಾಷ್ಟ್ರಗಳ ಪೈಕಿ ನೌರು ಹಾಗೂ ಟುವಾಲು ಪ್ರಮುಖ ರಾಷ್ಟ್ರಗಳು. ಸಹಜವಾಗಿಯೇ ಚೀನಾ ಕಾರ್ಯಕ್ರಮದಲ್ಲಿ ಪ್ರಾಬಲ್ಯ ತೋರ್ಪಡಿಸುವ ಉದ್ದೇಶದಿಂದ ಟುವಾಲು ಪ್ರಧಾನಿಗಿಂತ ಮೊದಲು ನಮ್ಮ ರಾಜತಾಂತ್ರಿಕ ಅಧಿಕಾರಿ ಮೊದಲು ಸಭೆಯನ್ನುದ್ದೇಶಿಸಿ ಮಾತನಾಡಬೇಕು ಪಟ್ಟು ಹಿಡಿದು ಕಿರಿಕಿರಿಯಾಗುವಂತೆ ನಡೆದುಕೊಂಡಿದೆ.  

ಚೀನಾ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೌರು ದ್ವೀಪ ರಾಷ್ಟ್ರದ ಅಧ್ಯಕ್ಷ ಬ್ಯಾರನ್ ವಕಾ, ಠಚೀನಾದ ರಾಯಭಾರಿ ಅಧಿಕಾರಿ ನಿಯಮಗಳನ್ನು ಮೀರಿ, ಸರದಿಗೂ ಮುನ್ನ ಮಾತನಾಡುವ ಮೂಲಕ ಫೋರಂ ಗೆ ಅವಮಾನವಾಗುವಂತೆ, ಪುಂಡ ವರ್ತನೆ ತೋರಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೀನಾದ ರಾಯಭಾರಿ ಅಧಿಕಾರಿಗಳ ವರ್ತನೆ ಬಗ್ಗೆ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿರುವ ನೌರುವಿನ ಅಧ್ಯಕ್ಷರಿಗೆ ಕ್ಷಮೆ ಕೇಳಲು ಚೀನಾವನ್ನು ಆಗ್ರಹಿಸುತ್ತೀರಾ? ಎಂಬ ಪ್ರಶ್ನೆ ಎದುರಾಗಿದೆ. "ಚೀನಾದ ರಾಯಭಾರಿ ನಡೆದುಕೊಂಡ ರೀತಿಗೆ ಮುಲಾಜಿಲ್ಲದೇ ಚೀನಾದಿಂದ ಕ್ಷಮೆ ಕೇಳಿಸುತ್ತೇವೆ, ಅದನ್ನು ಫೋರಂ ನೋಡಿಕೊಳ್ಳುತ್ತದೆ. ಅಲ್ಲಿಗೇ ನಿಲ್ಲಿಸದೇ ನಾವು ಚೀನಾದ ದುರ್ವರ್ತನೆಗೆ  ವಿಶ್ವಸಂಸ್ಥೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ" ಎಂದು ಗುಡುಗಿದ್ದಾರೆ. 

ನಿಯಮಗಳ ಪ್ರಕಾರ ರಾಜತಾಂತ್ರಿಕ ಅಧಿಕಾರಿಗಳಿಗಿಂತ ಮೊದಲು ಸದಸ್ಯ ರಾಷ್ಟ್ರಗಳ ಪ್ರಧಾನಿಗಳು ಹಾಗೂ ಸಚಿವರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ನಮಗೆ ಯಾರೂ ಆದೇಶ ನೀಡುವ ಅವಶ್ಯಕತೆ ಇಲ್ಲ. ಆದರೆ ಚೀನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಫೋರಂ ಗೆ ಅವಮಾನ ಮಾಡಿದೆ. "ಚೀನಾ ದೊಡ್ಡ ರಾಷ್ಟ್ರ ಅಂತೇನು ನಾವು ಕೇರ್ ಮಾಡೋದಿಲ್ಲ. ಅದು ನಮ್ಮ ಪಾಲುದಾರ ರಾಷ್ಟ್ರವಷ್ಟೇ, ಹೀಗೆಯೇ ಮಾಡಬೇಕು ಅಂತ ಡಿಕ್ಟೇಟ್ ಮಾಡಿ, ನಮಗೆ ಅಗೌರವ ತೋರಿಸುವಂತಿಲ್ಲ, ಚೀನಾಗೆ ವಿಶ್ವಸಂಸ್ಥೆಯಲ್ಲಿ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ತನ್ನ ದೇಶದ ರಾಯಭಾರಿ ಅಧಿಕಾರಿಯ ವರ್ತನೆಯನ್ನು ಬಿಟ್ಟು ನೌರು ಹಾಗೂ ತೈವಾನ್ ನಡುವಿನ ರಾಜತಾಂಟ್ರಿಕ ಸಂಬಂಧದ ಬಗ್ಗೆ ಸಂಪಾದಕೀಯ ಪ್ರಕಟಿಸಿದ್ದು, ನೌರುವಿನ ನಡೆಯಿಂದಾಗಿ ಇನ್ನೂ ತನ್ನ ರಾಜತಾಂತ್ರಿಕತೆಗೆ ಅವಕಾಶವಿದೆ ಎಂದು ತೈವಾನ್ ನಂಬಬಾರದು, ಎಲ್ಲೋ ದೂರದಲ್ಲಿರುವ ಪೆಸಿಫಿಕ್ ದ್ವೀಪರಾಷ್ಟ್ರ ತೈವಾನ್ ನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ಅಸಂಬದ್ಧ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಈ ಘಟನೆ ಬಗ್ಗೆ ಈ ವರೆಗೆ ಚೀನಾ ವಿದೇಶಾಂಗ ಸಚಿವಾಲಯವಾಗಲೀ ತೈವಾನ್ ನ ವಿದೇಶಾಂಗ ಸಚಿವಾಲಯವಾಗಲೀ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا