Urdu   /   English   /   Nawayathi

ಯಲ್ಲಾಪುರ ಗಾಂಜಾ ಪ್ರಕರಣದಲ್ಲಿ ಇಬ್ಬರ ಬಂಧನ

share with us

ಯಲ್ಲಾಪುರ: 05 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಯಲ್ಲಾಪುರ ತಾಲೂಕಿನ ಡೌಗಿನಾಲಾ ಬೊಂಬಡಿಕೊಪ್ಪದ ತಿರುವಿನ ಬಳಿ ಮಂಗಳವಾರದಂದು ಬೆಳಿಗ್ಗೆ ಸ್ಕೂಟಿಯೊಂದರಲ್ಲಿ ಕದ್ದೊಯ್ಯುತ್ತಿದ್ದ ಸುಮಾರು ಒಂದು ಕೆ,ಜಿ 170 ಗ್ರಾಂ ಒಣಗಿದ ಗಾಂಜಾದ ಜೊತೆಗೆ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿಗಳು ಚಾಲಕನ ವೃತ್ತಿಯನ್ನು ಮಾಡುತ್ತಿದ್ದ ಯಲ್ಲಾಪುರ ಪಟ್ಟಣ ನೂತನ ನಗರದ ಜಿಡ್ಡಿಯ ನಿವಾಸಿ ಅಬ್ದುಲ್ ಹಮೀದ್ ಮುಲ್ಲಾ(22) ಹಾಗೂ ಮತ್ತೊಬ್ಬ ಚಾಲಕ ಅಲ್ತಾಫ್ ಜಮಾಲ್ ಬೇಪಾರಿ(21) ಎಂದು ಗುರುತಿಸಲಾಗಿದೆ. ಪರಾರಿಯಾದ ಆರೋಪಿ ಜಮಗುಳಿ ತಿರುವಿನ ಮಿಲನ್ ಹೋಟೆಲ್ ಬಳಿ ಇರುವ ಗೌತಮ್ ಗಣಪತಿ ಪವಾರ್(22) ಎಂದು ಹೇಳಲಾಗಿದೆ. ಪೋಲೀಸರ ವಶದಲ್ಲಿರುವ ಗಾಂಜಾದ ಮೌಲ್ಯ ಸುಮಾರು 15 ಸಾವಿರ ರೂಪಾಯಿ ಹಾಗೂ ಸ್ಕೂಟಿಯ ಬೆಲೆ ಸುಮಾರು 20 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣ ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا