Urdu   /   English   /   Nawayathi

ವಿಧಿಯಾಟ: ಬೆಂಗಳೂರಿಂದ ಕೊಡಗಿಗೆ ಹೋದ ಮಾರನೇ ದಿನವೇ ಭೂಕುಸಿತದಲ್ಲಿ ಕುಟುಂಬ ಸಮೇತ ಮಣ್ಣಾದ ವಿದ್ಯಾರ್ಥಿನಿ!

share with us

ಮಡಿಕೇರಿ: 21 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮಹಾಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಇನ್ನು ಹಲವು ಗ್ರಾಮಗಳೇ ನಾಮವಶೇಷವಿಲ್ಲದಂತೆ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ.  ಮೂಲತಃ ಕೊಡಗಿನವರಾದ ಮೋನಿಷಾ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದಿದ್ದು, ಮೈಸೂರಿನ ಎಂಸಿಎ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಳು. ಬೆಂಗಳೂರಿನಲ್ಲಿ ಪಿಜಿಯೊಂದರಲ್ಲಿ ತಂಗಿದ್ದ ಮೋನಿಷಾ ಇಂಟನ್‌ಶಿಪ್ ಮುಗಿಸಿ ಇತ್ತೀಚೆಗಷ್ಟೇ ಸಂಬಂಧಿಕರೊಬ್ಬರ ಮದುವೆ ನಿಮಿತ ಆಕೆ ಬೆಂಗಳೂರಿನಿಂದ ಮಡಿಕೇರಿಗೆ ಹೋಗಿದ್ದಳು. 

ಮೋನಿಷಾ ಮನೆ ಸೇರಿದ ಮಾರನೇ ದಿನ ಭೂಕುಸಿತ ಸಂಭವಿಸಿದ್ದು ಇದರಲ್ಲಿ ಪೋಷಕರ ಸಮೇತ ಮೋನಿಷಾ ಕಣ್ಮರೆಯಾಗಿದ್ದರು. ಭೂಕುಸಿತದಲ್ಲಿ ನಾಲ್ವರು ನಾಪತ್ತೆಯಾಗಿದ್ದರು. ಇವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ. ಅವರನ್ನು ಮೋನಿಷಾ, ತಂದೆ ಬಸಪ್ಪ ಮತ್ತು ತಾಯಿ ಗೌರಮ್ಮ ಎಂದು ಗುರುತಿಸಲಾಗಿದೆ.

ಬಸಪ್ಪ ಸಂಬಂಧಿಕರು ಮೂವರ ಮೃತದೇಹಕ್ಕೂ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا