Urdu   /   English   /   Nawayathi

ಫಿಜಿಯಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 8.2ರಷ್ಟು ತೀವ್ರತೆ ದಾಖಲು

share with us

ಸಿಡ್ನಿ: 19 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 8.2ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.  ತಡರಾತ್ರಿ ಸುಮಾರು 12.19ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಾಜಧಾನಿ ಸುವಾದ ಸುಮಾರು 361 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಈ ವರೆಗೂ ಭೂಕಂಪದಿಂದಾದ ಸಾವು-ನೋವುಗಳ ಕುರಿತು ವರದಿಯಾಗಿಲ್ಲ.

ಸುನಾಮಿ ಎಚ್ಚರಿಕೆ ಇಲ್ಲ

ಇನ್ನು ಪ್ರಬಲ ಭೂಕಂಪನ ಸಂಭವಿಸಿದ್ದರೂ ಸುನಾಮಿ ಸಂಭವ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಗರ್ಭದ ತೀರ ಆಳದಲ್ಲಿ ಕಂಪನ ಸಂಭವಿಸಿದ್ದು, ಇದರಿಂದ ಸುನಾಮಿ ಅಲೆಗಳು ಏಳುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಭೂಕಂಪನ ಸಂಭವಿಸಿರುವ ಪ್ರದೇಶವನ್ನು ವಿಜ್ಞಾನಿಗಳು ರಿಂಗ್ ಫೈರ್ ಪ್ರದೇಶ ಗುರುತಿಸಿದ್ದು, ಇಲ್ಲಿ ಇಂತಹ ಕಂಪನಗಳು ಸಾಮಾನ್ಯ ಎಂದು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا