Urdu   /   English   /   Nawayathi

ಕರ್ನಾಟಕ ಪ್ರವಾಹ : ರೈಲ್ವೆ ಹಳಿ ಮೇಲಿನ ಗುಡ್ಡ ತೆರವಿಗೆ ಒಂದು ತಿಂಗಳು ಅಗತ್ಯ- ಅಧಿಕಾರಿಗಳು

share with us

ಮಂಗಳೂರು: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪ್ರವಾಹದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ  ಗುಡ್ಡ ಕುಸಿತದಿಂದ ಸಕಲೇಶಪುರ ಹಾಗೂ ಯಡಕುಮಾರಿ ಮತ್ತು ಸುಬ್ರಹ್ಮಣ್ಯ ನಡುವಿನ ರೈಲ್ವೆ ಹಳಿ ಬಿದ್ದಿರುವ ಅವಶೇಷಗಳ ತೆರವು ಕಾರ್ಯಾಚರಣೆಗೆ ಕಾರ್ಮಿಕರ ಕೊರತೆ  ಎದುರಾಗಿರುವುದರಿಂದ ರೈಲ್ವೆ ಅಧಿಕಾರಿಗಳು ನಿರಾಶೆಗೊಳಗಾಗಿದ್ದಾರೆ. ಗುಡ್ಡ ಕುಸಿತದ ಭೀತಿಯಿಂದ ರೈಲ್ವೆ ಹಳಿ ಮೇಲಿನ ಅವಶೇಷಗಳ ತೆರವು ಕಾರ್ಯಾಚರಣೆಗೆ ಕೂಲಿಯಾಳುಗಳೇ ಸಿಗುತ್ತಿಲ್ಲ. ಈ ಮಧ್ಯೆ  ಕೆಲವರು ಅವಶೇಷಗಳ ತೆರವಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ

ಅಸ್ಸಾಂ, ಪಶ್ಚಿಮ ಬಂಗಾಳ ಮತ್ತಿತರ ಕಡೆಗಳಿಂದ ಆಗಮಿಸಿರುವ  ಜನರ ನೆರವಿನ ಮೂಲಕ  ಅವಶೇಷಗಳ ತೆರವು ಕಾರ್ಯಾಚರಣೆಗೆ  ಅಧಿಕಾರಿಗಳು ಮುಂದಾಗಿದ್ದಾರೆ. 50 ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, 15 ಜೆಸಿಬಿ ಯಂತ್ರಗಳು ಹಾಗೂ 25 ರೈಲ್ವೆ ಗ್ಯಾಂಗ್ ಮ್ಯಾನ್  ಹಳಿ ತೆರವಿಗಾಗಿ ಹಗಲು ಇರುಳು ಶ್ರಮಿಸುತ್ತಿದ್ದಾರೆ.

ಪ್ರವಾಹದಿಂದಾಗಿ ಬೆಂಗಳೂರು- ಮಂಗಳೂರು ಮತ್ತು ಕಾರವಾರ ನಡುವಿನ ರೈಲು ಸಂಚಾರ ಕಳೆದ 10 ದಿನಗಳಿಂದಲೂ ಸ್ಥಗಿತಗೊಂಡಿದೆ. ಹಳಿ ಮೇಲಿನ ಅವಶೇಷಗಳ ತೆರವಿಗಾಗಿ ಇನ್ನೂ ಒಂದು ತಿಂಗಳ ಕಾಲ ಇಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಈ ಮಧ್ಯೆ ಬಿರುಗಾಳಿಯಿಂದಾಗಿ  ರಸ್ತೆ  ಪಕ್ಕ 100 ಮರಗಳು ಬಿದ್ದಿದ್ದು,  ಹಾಸನ- ಮಂಗಳೂರು, ಮಡಿಕೇರಿ ಮತ್ತು ಹಾಸನ , ಸೋಮವಾರ ಪೇಟೆ ಮತ್ತು ಶನಿವಾರ ಪೇಟೆ ನಡುವಿನ ರಸ್ತೆ ಮಾರ್ಗವನ್ನು  ಮುಚ್ಚಲಾಗಿದೆ. ಪ್ರವಾಹದಿಂದಾಗಿ  ಸಕಲೇಶಪುರ, ಅರಕಲಗೂಡು ತಾಲೂಕಿನಲ್ಲಿ ಸುಮಾರು 1 ಸಾವಿರ ಎಕರೆಯಷ್ಟು ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ.

ಮಡಿಕೇರಿ ಮತ್ತು ರಾಮನಾಥಪುರಕ್ಕೆ 27 ಸಾವಿರ ಲೀಟರ್ ಗುಡ್ ಲೈಪ್ ಹಾಲು ಸರಬರಾಜು ಮಾಡುವಂತೆ ಹಮೂಲ್ ಅಧ್ಯಕ್ಷ ಹೆಚ್. ಡಿ. ರೇವಣ್ಣ ನಿರ್ದೇಶನ ನೀಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا