Urdu   /   English   /   Nawayathi

ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್‌ ಜಾಮ್‌ ; ಸಾವಿರಾರು ಜನರ ಪರದಾಟ

share with us

ಮೂಡಿಗೆರೆ/ಬೆಳ್ತಂಗಡಿ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ 5 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿ ಸಾವಿರಾರು ಜನರು ನಿಂತಲ್ಲೇ ನಿಂತು ಪರದಾಡಬೇಕಾಯಿತು. ಶಿರಾಡಿ ಘಾಟ್‌ ಮತ್ತು ಸಂಪಾಜೆ ಘಾಟಿಯಲ್ಲಿ ಸಂಪರ್ಕ ಸಾಧ್ಯವಿಲ್ಲದ ಕಾರಣ ಹೆಚ್ಚಿನ ವಾಹನಗಳು ಚಾರ್ಮಾಡಿ ಘಾಟ್‌ನಲ್ಲಿ ಬರುತ್ತಿವೆ. 10 ನೇ ತಿರುವಿನಲ್ಲಿ  ಟ್ರಕ್ಕೊಂದು ಮಾರ್ಗ ಮಧ್ಯದಲ್ಲೇ ಪಲ್ಟಿಯಾದ ಕಾರಣ ಟ್ರಾಫಿಕ್‌  ಟ್ರಾಫಿಕ್‌ ಜಾಮ್‌ ಉಂಟಾಗಿದೆ. 

ಚಾರ್ಮಾಡಿ ಘಾಟಿಯಲ್ಲಿ  ಬೃಹತ್‌ ವಾಹನಗಳಿಗೆ ಸಂಚಾರಕ್ಕೆ ನಿಷೇಧ ಹೇರಿದರೂ ವಾಹನಗಳು ಸಂಚರಿಸುತ್ತಿರುವುದು ಇತರ ವಾಹನಗಳಿಗೆ ಭಾರೀ ಸಮಸ್ಯೆ ತಂದೊಡ್ಡುತ್ತಿದೆ. ಬಸ್‌ ಮತ್ತು ಕಾರುಗಳಲ್ಲಿ ಧರ್ಮಸ್ಥಳದತ್ತ ಬರುತ್ತಿದ್ದ ಸಾವಿರಾರು ಯಾತ್ರಿಕರು ಪರದಾಡಿದರು. ಮಳೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿತು. ಉಡುಪಿ, ಮಂಗಳೂರಿಗೆ ಬರಬೇಕಾದ ಬಸ್‌ಗಳು 5 ಗಂಟೆಗೂ ಹೆಚ್ಚು ವಿಳಂಬವಾಗಿ ಆಗಮಿಸಿದವು. ಆ.25ರ ಬೆಳಗ್ಗೆ 6 ಗಂಟೆವರೆಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಎಸ್‌.ಶಶಿಕಾಂತ್‌ ಸೆಂಥಿಲ್‌ ಅಧಿಸೂಚನೆ ಹೊರಡಿಸಿದ್ದಾರೆ.

ವೊಲ್ವೋಗೆ ಬದಲಿ ಮಾರ್ಗ !

ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆ ಯಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಬೆಂಗಳೂರಿಗೆ ಸಂಚರಿಸುವ ವೊಲ್ವೋ ಬಸ್‌ಗಳು ಹಗಲಲ್ಲಿ ಕಾರ್ಕಳ, ಕುದುರೆಮುಖ,
ಕಳಸ, ಮೂಡಿಗೆರೆ, ಹಾಸನ ಮೂಲಕ ಸಾಗಬೇಕಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا