Urdu   /   English   /   Nawayathi

ವಿವಾಹದಿಂದ ತಪ್ಪಿಸಿಕೊಳ್ಳಲು ಕೋಣೆಯಲ್ಲಿ ಅವಿತು ಕುಳಿತಿದ್ದರಂತೆ ಅಟಲ್ ಜೀ!

share with us

ಕಾನ್ಪುರ್: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಸಾಂಸಾರಿಕ ಜೀವನದಿಂದ ದೂರವಿರಲು ಬಯಸಿದ್ದ ಪ್ರಧಾನಿ ಮೋದಿ ಪೋಷಕರ ಒತ್ತಾಯಕ್ಕೆ ಮದುವೆಯಾಗಿ, ಬಳಿಕ ಮನೆ ತೊರೆದು ಹೋಗಿದ್ದು ನಿಮಗೆ ಗೊತ್ತಿರಲಿಕ್ಕೆ ಸಾಕು. ಅವರ ಗುರು, ಮೊನ್ನೆ ತಾನೇ ನಮ್ಮನ್ನಗಲಿದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಅವರ ಬದುಕಲ್ಲೂ ಸಹ ಯೌವ್ವನಾವಸ್ಥೆಯಲ್ಲೊಮ್ಮೆ ಇಂತಹದ್ದೇ ಇಕ್ಕಟ್ಟಿಗೆ ಸಿಲುಕಿದ್ದರಂತೆ. ಜೀವನ ಪೂರ್ತಿ ಅವಿವಾಹಿತರಾಗಿರ ಬಯಸಿದ್ದ ಅವರಿಗೆ ಮದುವೆ ಮಾಡಲು ಪೋಷಕರು ಹೆಣ್ಣು ಹುಡುಕತೊಡಗಿದ್ದರಂತೆ. ಇದರಿಂದ ತಪ್ಪಿಸಿಕೊಳ್ಳಲು ಅಟಲ್ ಜೀ ಮಾಡಿದ್ದೇನು ಗೊತ್ತಾ?... ಆ ಸ್ವಾರಸ್ಯಕರ ಸಂಗತಿ ಇಲ್ಲಿದೆ ನೋಡಿ. 

1940ರ ದಶಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರ್‌ದ ಡಿಎವಿ ಕಾಲೇಜಿನಲ್ಲಿ ಸ್ನಾತ್ತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪೋಷಕರು ಅವರ ವಿವಾಹ ಮಾಡಿಸಲು ಮುಂದಾಗಿದ್ದರಂತೆ. ಪೋಷಕರು ತನ್ನ ವಿವಾಹಕ್ಕಾಗಿ ಕನ್ಯಾ ಹುಡುಕುತ್ತಿದ್ದಾರೆಂಬ ಸಂಗತಿ ತಿಳಿದ ಅಟಲ್ ಜೀ, ರಾಯಪುರದಲ್ಲಿರುವ ತಮ್ಮ ಆತ್ಮೀಯ ಸ್ನೇಹಿತ ಗೋರೆ ಲಾಲ್ ತ್ರಿಪಾಠಿ ಅವರ ಮನೆಯಲ್ಲಿ ಮೂರು ದಿನಗಳ ಕಾಲ ಅವಿತು ಕುಳಿತಿದ್ದರಂತೆ. ಹೀಗಂತ, ತ್ರಿಪಾಠಿ ಅವರ ಪುತ್ರ ವಿಜಯ್ ಪ್ರಕಾಶ್ ಹೇಳಿದ್ದಾರೆ. 

ಅಟಲ್ ಜೀ ಹಾಗೂ ತ್ರಿಪಾಠಿ ಆರ್‌ಎಸ್‌ಎಸ್ ಶಾಖಾಗಳಲ್ಲಿ ಭಾಗವಹಿಸುತ್ತಲೇ ಸ್ನೇಹಿತರಾದವರು. 

ವಿವಾಹ ಎಂಬ ಜಂಜಾಟದಿಂದ ತಪ್ಪಿಸಿಕೊಳ್ಳಲು ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ಮನೆಯಲ್ಲಿರುವ ಅಥಿತಿಗಳ ಕೋಣೆಯಲ್ಲಿ ಮೂರು ದಿನಗಳ ಕಾಲ ಅವಿತು ಕುತ್ತಿದ್ದರು. ನೀರು, ಆಹಾರ ಹಾಗೂ ಶೌಚ್ಛಕ್ಕೆ ಹೋಗಬೇಕಾದರೆ ಮಾತ್ರ ಕೋಣೆಯಿಂದ ಹೊರ ಬರುತ್ತಿದ್ದರು ಎನ್ನವ ಸಂಗತಿಯನ್ನು ನಮ್ಮ ತಂದೆ ಆಗಾಗ ಹೇಳುತ್ತಿದ್ದರು' ಎಂದು ವಿಜಯ್ ಪ್ರಕಾಶ್ ತಂದೆಯ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. 
ನೀವು ಮದುವೆ ಎಂದರೆ ಮಾರುದ್ದ ದೂರ ಓಡುವುದೇಕೇ? ಎಂದು ಗೆಳೆಯ ಗೋರೆ ಲಾಲ್ ಕೇಳಿದಾಗ ವಾಜಪೇಯಿ ಹೇಳಿದ್ದರಂತೆ: ನನ್ನ ಬದುಕನ್ನು ದೇಶಕ್ಕಾಗಿ ಮೀಸಲಾಗಿಡಲು ಬಯಸಿದ್ದೇನೆ, ಮದುವೆಯಾದರೆ ಅದು ಸಾಧ್ಯವಿಲ್ಲವೆಂದು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا