Urdu   /   English   /   Nawayathi

ಕೇರಳ: ಮೀನು ಮಾರಾಟ ಮಾಡಿ ಟ್ರೋಲ್ ಗೊಳಗಾಗಿದ್ದ ಯುವತಿಯಿಂದ 1.5 ಲಕ್ಷ ರೂ. ಪರಿಹಾರ ದಾನ

share with us

ಕೊಚ್ಚಿ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶಿಕ್ಷಣ ವೆಚ್ಚ ಭರಿಸಲು ಮೀನು ಮಾರಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಾಗಿದ್ದ   21 ವರ್ಷದ ಕಾಲೇಜ್ ವಿದ್ಯಾರ್ಥಿನಿ ಹನಾನ್  ಈಗ ಪ್ರವಾಹ ಪರಿಹಾರವಾಗಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ  1.5 ಲಕ್ಷ ಹಣವನ್ನು ನೀಡಿದ್ದಾರೆ. ಶಿಕ್ಷಣ ವೆಚ್ಚಕ್ಕಾಗಿ ಹಲವು ಜನರು ಹಣ ನೀಡಿದ್ದಾರೆ. ಇದರಿಂದಾಗಿ ಆಕೆಯ ಕುಟುಂಬದ ನಿರ್ವಹಣಾ ವೆಚ್ಚ ಭರಿಸುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕ ರೀತಿಯಲ್ಲಿ ಹಂಚಿಕೆಯಾಗಿದೆ.

ಜನರಿಂದ ನಾನು ಹಣ ಪಡೆದಿದ್ದು, ಅಗತ್ಯವಿರುವ ಜನರಿಗೆ ಸಂತೋಷದಿಂದ ಅದನ್ನು ನೀಡುತ್ತಿರುವುದಾಗಿ ಹನಾನ್ ಹೇಳಿದ್ದಾರೆ. ಹನಾನ್ ವಾರಾಂತ್ಯ ಕಾರ್ಯಕ್ರಮಗಳಲ್ಲಿ ನಿರೂಪಕಿ ಹಾಗೂ ಹೂ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು, ಪರಿಹಾರ ಕಾರ್ಯಕ್ಕಾಗಿ ನೆರವು ನೀಡುವಂತೆ ಜನರಲ್ಲಿ ಆಕೆ ಮನವಿ ಮಾಡಿದ್ದಾಳೆ.

ಇಡುಕ್ಕಿ ಜಿಲ್ಲೆಯಲ್ಲಿನ ತೊಡುಪುಝಾದಲ್ಲಿ ಹನಾನ್  ಬಿ.ಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ಕಷ್ಟದ ಜೀವನದ    ಬಗ್ಗೆ ಮಲಯಾಳಂ ಡೈಲಿಯಲ್ಲಿ ಸುದ್ದಿ ವರದಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಆಕೆಯ ಕಷ್ಟದ ಜೀವನದ ಬಗ್ಗೆ ಶಂಕೆ  ವ್ಯಕ್ತಪಡಿಸಿದ್ದಾರೆ. ಇದು ನಕಲಿ ಎಂದು ಹೇಳುತ್ತಿದ್ದಾರೆ.

ಹನಾನ್ ಹೊರತುಪಡಿಸಿದಂತೆ ಸರ್ಕಾರಿ ನೌಕರರು, ಸಾಮಾಜಿಕ ಜಾಲತಾಣ ಗುಂಪುಗಳು, ವಿದ್ಯಾರ್ಥಿಗಳು, ನಟರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಪರಿಹಾರ ನೀಡಲು ಮುಂದಾಗಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا